ಉದಯವಾಹಿನಿ, ನವದೆಹಲಿ : 2024ರ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಅಧಿವೇಶನಕ್ಕಾಗಿ ಜೂನ್ 12 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದೆ.ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎಸ್ಪಿ ಮತ್ತು ಎಎಪಿ ಸೇರಿದಂತೆ 20 ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಸಂಸತ್ ಭವನದ ಉದ್ಘಾಟನೆಯನ್ನ ಬಹಿಷ್ಕರಿಸಿದ ನಂತ್ರ ಈ ಬೆಳವಣಿಗೆ ನಡೆದಿದೆ.ಅಂದ್ಹಾಗೆ, ‘ಪ್ರಜಾಪ್ರಭುತ್ವದ ಆತ್ಮವನ್ನ ಹೀರಿಕೊಂಡಾಗ’ ನೂತನ ಭವನದಲ್ಲಿ ಅವರಿಗೆ ಯಾವುದೇ ಮೌಲ್ಯವಿಲ್ಲ ವಿಪಕ್ಷಗಳು ಹೇಳಿವೆ.
