ಉದಯವಾಹಿನಿ, ತುಮಕೂರು: ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದ ಸಚಿವರ ಖಾತೆ ಸಹಿತ ವಿವರ ಇರುವ ಅಧಿಕೃತ ಪಟ್ಟಿ ನಿನ್ನೆ ತಡರಾತ್ರಿ ಪ್ರಕಟಗೊಂಡಿದ್ದು, ನೂತನ ಸಚಿವರು ತಮಗೆ ಸಿಕ್ಕ ಖಾತೆಗಳ ಕುರಿತು ಅನಿಸಿಕೆ ಹಂಚಿಕೊಳ್ಳಲಾರಂಭಿಸಿದ್ದಾರೆ. ನೂತನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ತಮ್ಮ ಖಾತೆ ವಿಚಾರವಾಗಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.ಗೃಹ ಖಾತೆ ನನಗೆ ಒಪ್ಪಿಗೆ ಇರೋದು ಬೇರೆ ವಿಚಾರ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು. ಪಕ್ಷ ಯಾವ ಜವಾಬ್ದಾರಿ ಕೊಡುತ್ತದೋ ಅದನ್ನು ಮಾಡಬೇಕು ಎಂದ ಅವರು, ನನಗೆ ಬೇರೆ ಖಾತೆ ಸಿಗುವ ನಿರೀಕ್ಷೆ ಇತ್ತು ಎಂಬ ಮಾತನ್ನೂ ಹೇಳಿದರು.
