ಉದಯವಾಹಿನಿ : ಬೆಳಗಿನ ಸಮಯದಲ್ಲಿ ಲಘು ಉಪಹಾರ ಸೇವಿಸಲು ಬಯಸುವವರಿಗೆ ಇಡ್ಲಿಗಳು ಅತ್ಯುತ್ತಮ ಆಯ್ಕೆಯಾಗಿದೆ. ಇಡ್ಲಿ ತಯಾರಿಸಲು ಸಾಮಾನ್ಯವಾಗಿ ಬೇಳೆಯನ್ನು ನೆನೆಸಿ ಹಿಟ್ಟು ರುಬ್ಬಿಕೊಳ್ಳಬೇಕಾಗುತ್ತದೆ. ಬಳಿಕ ನಂತರ ಈ ಹಿಟ್ಟನ್ನು ರವೆಯೊಂದಿಗೆ ಬೆರೆಸಿ ಹುದುಗಿಸಬೇಕಾಗುತ್ತದೆ. ಈ ಪ್ರಕ್ರಿಯೆ ಸಾಕಷ್ಟು ಸಮಯ ಬೇಕಾಗುತ್ತದೆ. ಹಲವು ಜನರು ಒಂದು ವಾರದವರೆಗೆ ಸಾಕಷ್ಟು ಇಡ್ಲಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಇಡುತ್ತಾರೆ. ಕೆಲವೊಮ್ಮೆ ಹಿಟ್ಟು ಖಾಲಿಯಾದರೆ ಅನೇಕರು ಗೊಂದಲಕ್ಕೊಳಗಾಗಿ, ಯಾವ ಉಪಹಾರ ತಯಾರಿಸಬೇಕು ಎಂದು ಚಿಂತಿಸುತ್ತಾರೆ.

ಹಲವು ಜನರು ಸೂಪರ್​ ಸಾಫ್ಟ್​ ಆಗಿರುವ ಇಡ್ಲಿಗಳನ್ನು ಹೇಗೆ ತಯಾರಿಸಬೇಕೆಂದು ಯೋಚಿಸುತ್ತಾರೆ. ಇದಕ್ಕಾಗಿಯೇ ಹಿಟ್ಟನ್ನು ಮುಂಚಿತವಾಗಿ ತಯಾರಿಸದೆಯೇ ತ್ವರಿತ ಇಡ್ಲಿಗಳನ್ನು ತಯಾರಿಸಲು ನಾವು ನಿಮಗಾಗಿ ಈ ರೆಸಿಪಿಯನ್ನು ತಂದಿದ್ದೇವೆ. ರಾಗಿ ಹಿಟ್ಟಿನಿಂದ ಇಡ್ಲಿಗಳನ್ನು ಈ ರೀತಿ ಸಿದ್ಧಪಡಿಸಿದರೆ ತುಂಬಾ ಮೃದು, ರುಚಿಕರವಾಗಿರುತ್ತವೆ. ಈ ಇಡ್ಲಿಗಳನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ರಸಿಪಿಯನ್ನು ಕೆಲವೇ ನಿಮಿಷಗಳಲ್ಲಿ ಬಿಸಿ ಬಿಸಿಯಾಗಿ ತಯಾರಿಸಬಹುದು. ಯಾವುದೇ ಚಟ್ನಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರು ಸಂತೋಷದಿಂದ ಸವಿಯಬಹುದು. ಇದೀಗ ಸೂಪರ್ ಸಾಫ್ಟ್ ರಾಗಿ ಇಡ್ಲಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಸೂಪರ್ ಸಾಫ್ಟ್ ರಾಗಿ ಇಡ್ಲಿಗಾಗಿ ಬೇಕಾಗುವ ಪದಾರ್ಥಗಳು:

ರಾಗಿ ಹಿಟ್ಟು – ಒಂದು ಕಪ್
ಬಾಂಬೆ ರವೆ – ಒಂದು ಕಪ್
ಮೊಸರು – ಒಂದು ಕಪ್
ಅಡುಗೆ ಸೋಡಾ – 1 ಟೀಸ್ಪೂನ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ತುಪ್ಪ – ಅಗತ್ಯಕ್ಕೆ ತಕ್ಕಷ್ಟು

ಮನೆಯ ಎಲ್ಲ ಸದಸ್ಯರಿಗೂ ಇಷ್ಟವಾಗುವಂತಹ ಸೂಪರ್ ಸಾಫ್ಟ್ ರಾಗಿ ಇಡ್ಲಿ ತಯಾರಿಸಲು ಮೊದಲಿಗೆ, ಒಂದು ಕಪ್ ರಾಗಿ ಹಿಟ್ಟು, ಒಂದು ಕಪ್ ಬಾಂಬೆ ರವೆ ಮಿಶ್ರಣ ಮಾಡಿಕೊಳ್ಳಿ.
ಇದಕ್ಕೆ ಒಂದು ಕಪ್ ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಂದು ಟೀಸ್ಪೂನ್ ಅಡುಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ.
ಇದೀಗ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ರೀತಿಯಲ್ಲಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಬ್ಯಾಟರ್ ಮುಚ್ಚಿ 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. 15 ನಿಮಿಷಗಳ ನಂತರ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.

Leave a Reply

Your email address will not be published. Required fields are marked *

error: Content is protected !!