ಉದಯವಾಹಿನಿ, ತುಮಕೂರು: ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸಿದ್ದಗಂಗಾ ಮಠದ 10 ಕೋಟಿ ರೂ. ಅನುದಾನ ಸೇರಿದಂತೆ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ 20 ಕೋಟಿ ರೂ. ಅನುದಾನವನ್ನು ತಡೆಹಿಡಿದಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಆರೋಪಿಸಿದ್ದಾರೆ.ಈ ಕುರಿತು ಮಾತಾನಾಡಿದ್ದ ಅವರು, ಹಾಸ್ಟೆಲ್ ನಿರ್ಮಾಣಕ್ಕೆಂದು ಬಿಜೆಪಿ ಸರ್ಕಾರವು ತನ್ನ ಅವಧಿಯಲ್ಲಿ ಸಿದ್ದಗಂಗಾ ಮಠದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆಂದು 10 ಕೋಟಿ ರೂ. ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ 20 ಕೋಟಿ ರೂ.ಅನುದಾನವನ್ನು ಕಾಂಗ್ರೆಸ್ನವರು ತಡೆಹಿಡಿದಿದ್ದಾರೆ. ಸಿದ್ದಗಂಗಾ ಮಠದ ಅನುದಾನವನ್ನು ಶಾಶ್ವತವಾಗಿ ತಡೆ ಹಿಡಿಯುವ ಧಮ್ಮು ಸರ್ಕಾರಕ್ಕೆ ಇಲ್ಲ, ಅನುದಾನ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
