ಉದಯವಾಹಿನಿ, ಹೈದರಾಬಾದ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡುಗೆ ಮಹಿಳೆಯೊಬ್ಬರು ಮುತ್ತುಕೊಡಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಚಂದ್ರಬಾಬು ನಾಯ್ಡು ಅನಕಾಪಲ್ಲಿಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಹೂಗುಚ್ಚವನ್ನು ನಾಯ್ಡು ಅವರಿಗೆ ನೀಡಿ ಬಳಿಕ ಮುತ್ತು ಕೊಡಲು ಯತ್ನಿಸಿದರು ತಕ್ಷಣ ನಾಯ್ಡು ಅದನ್ನು ತಡೆದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ನಾಯ್ಡುಗೆ ಝಡ್‌ಪ್ಲಸ್‌‍ ಭದ್ರತೆ ಇದೆ. ಪ್ರವಾಸದ ಅಂಗವಾಗಿ ಹಲವು ಟಿಡಿಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಚಂದ್ರಬಾಬು ಅವರನ್ನು ನೋಡಲು ಬಂದಿದ್ದರು. ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಮಹಿಳಾ ಅಭಿಮಾನಿಯೊಬ್ಬರು ಬಾಬು ಭೇಟಿಗೆ ಯತ್ನಿಸಿದ್ದಾರೆ. ಚಂದ್ರಬಾಬುವನ್ನು ಭೇಟಿಯಾಗಲು ಸುತ್ತಲಿನ ಸೆಕ್ಯುರಿಟಿಯನ್ನು ತಪ್ಪಿಸಿ ಅವರ ಬಳಿಗೆ ಬಂದಿರುವುದು ಭದ್ರತಾಲೋಪಕ್ಕೆ ಕಾರಣವಾಗಿದೆ. ಆಕೆಗೆ ಮುತ್ತು ಕೊಡುವ ಯತ್ನಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ, ತನ್ನ ನೆಚ್ಚಿನ ನಾಯಕನ ಮೇಲಿನ ಪ್ರೀತಿ ಅಭಿಮಾನ ತೋರುವ ಪ್ರಯತ್ನ ಇದಾಗಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಮಹಿಳೆ ಮಾತನಾಡಿ, ಈ ದಿನವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ, ಟಿವಿಯಲ್ಲಿ ನಾಯಕನನ್ನು ನೋಡುತ್ತ್ದೆಿ, ನೆಚ್ಚಿನ ನಾಯಕನನ್ನು ಖುದ್ದಾಗಿ ಕಂಡರೆ ಸಾಕು ಎಂದು ಅಂದುಕೊಂಡ್ದೆಿ ಆದರೆ ಅವಕಾಶ ಸಿಕ್ಕಿದ್ದು ನನ್ನ ಅದಷ್ಟ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!