ಉದಯವಾಹಿನಿ, ಬೆಂಗಳೂರು: ವಕ್ಫ್ ಆಸ್ತಿ ಒತ್ತುವರಿ ವಿಚಾರವಾಗಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಸ್ವಪಕ್ಷೀಯರೇ ಆಕ್ರೋಶ ವ್ಯಕ್ತಪಡಿಸ ಲಾರಂಭಿಸಿದ್ದಾರೆ. ಜನಾಕ್ರೋಶದಿಂದ ಕಾಂಗ್ರೆಸ್‌ಗೆ ಮುಳುವಾಗಲಿದೆ ಎಂಬ ಸೂಚನೆ ಅರಿತ ಕಾಂಗ್ರೆಸಿಗರು ಒಬ್ಬರ ನಂತರ ಒಬ್ಬರು ಜಮೀರ್ ವಿರುದ್ಧ ಆಕ್ಷೇಪ ಎತ್ತುತ್ತಿದ್ದಾರೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಮುಖ್ಯಮಂತ್ರಿ ಯವರು ಕಾನೂನು ಬಾಹಿರವಾದ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ. ಆದರೆ ವಕ್‌್ಫ ಸಚಿವರಾಗಿರುವ ಜಮೀರ್ ಅಹಮದ್ ಖಾನ್ ಸಿಎಂ ಹೆಸರು ಬಳಸಿಕೊಂಡು ನಿಯಮ ಬಾಹಿರವಾಗಿ ಖಾತೆಗಳನ್ನು ಬದಲಾವಣೆ ಮಾಡಿ ಎಂದು ಹೇಳುತ್ತಿರುವುದು ತಪ್ಪು. ಈ ಸೂಚನೆಗಳನ್ನು ಅಧಿಕಾರಿಗಳು ಪಾಲಿಸುತ್ತಿರುವುದು ಕೂಡ ಸರಿಯಲ್ಲ ಎಂದಿದ್ದಾರೆ.
ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲು ಯಾರು ಕಾರಣಕರ್ತರು ಎಂಬುದನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ತಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸುವುದಾಗಿ ತಿಳಿಸಿದರು. ಒಂದು ವೇಳೆ ಬಿಜೆಪಿಯವರೇ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಿ ಉದ್ದೇಶಪೂರ್ವಕವಾಗಿಯೇ ರಾಜಕೀಯ ಮಾಡುತ್ತಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಬೆಂಬಲ ನೀಡಿದ್ದಾರೆ. ಕೇವಲ ನೋಟಿಸ್ ನೀಡುವುದರಿಂದ ಒತ್ತುವರಿ ತೆರವಾಗುವುದಿಲ್ಲ. ಅವರ ಅವಧಿಯಲ್ಲಿ ಈ ವಿಚಾರವಾಗಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ವಿನ್ಸರ್‌ಮ್ಯಾನರ್‌ನ ಆಸ್ತಿ
