ಉದಯವಾಹಿನಿ, ವಿಜಯಪುರ: ವಕ್ಫ್ ವಿಷಯದಲ್ಲಿ ಬಿಜೆಪಿ ವಿನಾಕಾರಣ ರಾಜಕಾರಣ ಮಾಡುತ್ತಿದೆ, ನೈಜ ರೈತರು ಯಾರೂ ಹೋರಾಟ ಮಾಡುತ್ತಿಲ್ಲ, ಆರ್‍ಎಸ್‍ಎಸ್ ಪ್ರೇರಿತ ಭಾರತೀಯ ಕಿಸಾನ್ ಸಂಘ ಮಾತ್ರ ಹೋರಾಟಕ್ಕೆ ಅಣಿಯಾಗುತ್ತಿದೆ, ದೇಶದಲ್ಲಿ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿದಂತೆ ವಕ್ಫ್ ಆಸ್ತಿಯನ್ನು ಮಾರಾಟ ಮಾಡುವುದು ಕೇಂದ್ರದ ಬಿಜೆಪಿ ಸರ್ಕಾರದ ಹುನ್ನಾರ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಆಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಸಂರಕ್ಷಣೆಯ ವಿಷಯವಾಗಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿರುವ ವಿಡಿಯೋ ತುಣುಕುಗಳನ್ನು ಸಹ ಎಲ್‍ಇಡಿ ಮೂಲಕ ಪ್ರದರ್ಶಿಸಿದ ಗಣಿಹಾರ, ಅವರ ಪಕ್ಷದ ಮುಖ್ಯಮಂತ್ರಿಯಾಗಿದ್ದ ಹಿರಿಯ ನಾಯಕರೇ ವಕ್ಫ್ ಕುರಿತು ಸತ್ಯವಾದ ಮಾತುಗಳನ್ನಾಡಿದ್ದಾರೆ, ಈಗ ಅವರಿಗೂ ಸಹ ಬಿಜೆಪಿ ಅಪಮಾನ ಮಾಡುತ್ತಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಕೇಂದ್ರದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ತರಲು ಬಿಜೆಪಿ ಹವಣಿಸುತ್ತಿದೆ, ಆದರೆ ಕಾಯ್ದೆ ಅಂದು ಪಾಸ್ ಆಗಲಿಲ್ಲ, ಹೀಗಾಗಿಯೇ ಈ ರೀತಿಯ ವಿದ್ಯಮಾನ ಸೃಷ್ಟಿಸಿ ವಕ್ಫ್ ಕಾಯ್ದೆಯ ಬಗ್ಗೆ ಜನರಿಗೆ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ದೇಶದಲ್ಲಿ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿದಂತೆ ವಕ್ಫ್ ಆಸ್ತಿಯನ್ನು ಮಾರಾಟ ಮಡಲು ಹೊರಟಿದೆ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!