ಉದಯವಾಹಿನಿ, ಕೆ.ಆರ್.ಪುರ : ನಗರದಲ್ಲಿ ಅನ್ಯಭಾಷಿಕರು ನೆಲೆಸುವ ಭಾಗಗಳಲ್ಲಿ ಕನ್ನಡ ಅರಿವು ಮೂಡಿಸುವ ಮೂಲಕ ಕನ್ನಡ ಭಾಷೆಯ ಕಲಿಕೆಗೆ ಉತ್ತೇಜಿಸುವಂತೆ ಶಾಸಕ ಬಿ.ಎ.ಬಸವರಾಜ ಅವರು ಮನವಿ ಮಾಡಿದರು.
ಕೆಆರ್ ಪುರ ಕ್ಷೇತ್ರದ ಅಪರ್ಣ ಅಪಾರ್ಟ್ ಮೆಂಟ್ ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಇತ್ತೀಚೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಅನ್ಯರಾಜ್ಯದ ನಿವಾಸಿಗಳು ವಾಸುಸುತ್ತಿದ್ದು ,ಇಂತಹ ಭಾಗಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಮಾಡುವ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ನುಡಿದರು.
ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿದಿನ ಮನೆಮನೆಗಳಲ್ಲಿ ರಾಜ್ಯೋತ್ಸವ ಆಚರಣೆ ಮಾಡುವಂತೆ ಸಲಹೆ ನೀಡಿದರು. ಗ್ರಾಮದ ಹಿರಿಯ ಮುಖಂಡ ಶ್ರೀನಿವಾಸಗೌಡ ಅವರು ಮಾತನಾಡಿ ನಮ್ಮ ಭಾಷೆಯನ್ನು ಅನ್ಯಭಾಷಿಕರಿಗೆ ಕಲಿಸುವ ಮೂಲಕ ಭಾಷೆಯ ಮೇಲಿನ ಅಭಿಮಾನ ತೊಇರಿಸುವಂತೆ ಯುವಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಶ್ರೀನಿವಾಸಗೌಡ, ಮುಖಂಡರಾದ ಕೆ.ನಾರಾಯಣಪುರ ಮಂಜು, ಲೋಕನಾಥ್ ಮತ್ತಿತರರಿದ್ದರು.
