ಉದಯವಾಹಿನಿ, ಹಾಸನ: ಅಪಘಾತದಲ್ಲಿ ನಿಧನರಾಗಿರುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರ ಮೃತದೇಹವನ್ನು ಡಿಎಆರ್ ಮೈದಾನದಲ್ಲಿಟ್ಟು ಅಂತಿಮ ನಮನದೊಂದಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೈಸೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿ ಹಾಸನ ಜಿಲ್ಲೆಯ ಡಿವೈಎಸ್ಪಿಯಾಗಿ ಇಂದು ಅಧಿಕಾರ ವಹಿಸಿಕೊಳ್ಳ ಬೇಕಿತ್ತು.ಹಾಸನದ ಡಿಎಆರ್ ಕಾನ್‌್ಸಟೇಬಲ್ ಮಂಜೇಗೌಡ ಅವರು ಮೈಸೂರಿನಿಂದ ಹರ್ಷಬರ್ಧನ್ ಅವರನ್ನು ಬೊಲೆರೊ ಜೀಪ್ನಲ್ಲಿ ಹಾಸನಕ್ಕೆ ಕರೆತರುತ್ತಿದ್ದಾಗ ನಿನ್ನೆ ಸಂಜೆ ಕಿತ್ತಾನೆ ಗಡಿ ಬಳಿ ಜೀಪ್ ಟೈರ್ ಸ್ಫೋಟಗೊಂಡು ಉರುಳಿಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟಾಗಿತ್ತು.
ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ ಹಾಸನದ ಡಿಎಆರ್ ಮೈದಾನದಲ್ಲಿ ಅಂತಿಮ ನಮನ ಹಾಗೂ ಸರ್ಕಾರಿ ಗೌರವ ಸಲ್ಲಿಸಿ ಬಳಿಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಆ್ಯಂಬುಲೆನ್‌್ಸ ಮೂಲಕ ರವಾನಿಸಲಾಯಿತು.
ಬೆಂಗಳೂರಿನ ಯಲಹಂಕದಲ್ಲಿನ ಎಪಿಟಿಎಸ್ ಮೈದಾನದಲ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಇಲಾಖೆಯ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ. ಕುಟುಂಬಸ್ಥರು ಸಹ ನಗರಕ್ಕೆ ಬಂದಿದ್ದಾರೆ. ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರು ಆಸ್ಪತ್ರೆಗೆ ತೆರಳಿ ಅಧಿಕಾರಿಯ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
