ಉದಯವಾಹಿನಿ ,ಕೆಜಿಎಫ್: ನಗರಸಭೆ ಸಾಮಾನ್ಯ ಸಭೆಯು ಕಳೆದ ೨ ವರ್ಷಗಳಿಂದ ಅದರಲ್ಲೂ ನಗರಸಭೆಯ ೨ ನೇ ಅವದಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆದು ೩ ತಿಂಗಳು ಕಳೆದರು ನಗರಸಭೆ ಸದಸ್ಯರ ಸಾಮಾನ್ಯ ಸಭೆಯನ್ನು ಕರೆದಿರಲಿಲ್ಲ ಆದರೆ ಕಳೆದ ೧ತಿಂಗಳಿನಿಂದ ನಗರಸಭೆ ಸದಸ್ಯರು ಸಾಮಾನ್ಯ ಸಭೆಯನ್ನು ಕರೆಯುವಂತೆ ಒತ್ತಾಯ ಮಾಡುತ್ತಿದ್ದ ಹಿನ್ನಲ್ಲೆಯಲ್ಲಿ ಇದೇ ತಿಂಗಳ ೬ ರಂದು ನಗರಸಭೆ ಸದಸ್ಯರ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿಯದಶಂಕರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ .
ಪ್ರಥಮ ಅವದಿ ಪೂರ್ಣಗೊಂಡ ನಂತರ ಸರ್ಕಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸದಿದ್ದರಿಂದ ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಇಲ್ಲದೆ ಸಾಮಾನ್ಯ ಸಭೆಯು ನಡೆಯಲಿಲ್ಲ ಆದರೆ ಸರ್ಕಾರ ಕಳೆದ ೩ ತಿಂಗಳ ಹಿಂದೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದರು ನಗರಸಭೆ ಸದಸ್ಯರ ಸಾಮಾನ್ಯ ಸಭೆ ಕರೆದಿರಲಿಲ್ಲ ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಾರಿ ಟೀಕೆಗೆ ಗುರಿಯಾಗಿತ್ತು . ಡಿ. ೬ ರಂದು ಸಾಮಾನ್ಯ ಸಭೆ ಕರೆಯಲಾಗಿದ್ದು ಸಭೆಯಲ್ಲಿ ೧೫ ಕ್ಕೂ ಹೆಚ್ಚು ಅಜೆಂಡ್‌ಗಳನ್ನು ಇಡಲಾಗಿದ್ದು ಅದರಲ್ಲಿ ಮುಖ್ಯವಾಗಿ ನಗರೋತ್ತನ ಯೋಜನೆಯಡಿ ೩೫ ವಾರ್ಡ್‌ಗಳಲ್ಲಿ ಶೇ:೩೦ ರಷ್ಟು ಮಾತ್ರ ಕಾಮಗಾರಿ ಕೈಗೊಳ್ಳಲಾಗಿರುವುದರ ಬಗ್ಗೆ ನಗರಸಭೆ ಸದಸ್ಯರು ಅಸಮಾಧನ ಹೊರ ಹಾಕಿದ್ದು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಹ ನೀಡಲಾಗಿದೆ .
