ಉದಯವಾಹಿನಿ, ಕೆ.ಆರ್.ಪುರ : ಶ್ರೀರಾಮ ಪ್ರೊಡಕ್ಷನ್ಸ್ ನ ಮಂಜುಕವಿ ನಿರ್ದೇಶನದ ಸುಚೇಂದ್ರಪ್ರಸಾದ್ ಅಭಿನಯದ ಬಡವರ ಮಕ್ಳೂ ಬೆಳಿಬೇಕು ಕಣ್ರಯ್ಯ ಸಿನಿಮಾದ ಮೊದಲ ಹಾಡು ’ಅಪ್ಪ ಎಂದರೆ ಅಗಸ’ ಎಂಬ ಹಾಡನ್ನು ನಿರ್ಮಾಪಕ ಸಿ.ಎಸ್.ವೆಂಕಟೇಶ್ ಅವರು ಕೆ.ಆರ್.ಪುರದ ಖಾಸಗಿ ಹೊಟೇಲ್ ನಲ್ಲಿ ಬಿಡುಗಡೆಗೊಳಿಸಿದರು.
ನಿರ್ಮಾಪಕ ಸಿ.ಎಸ್.ವೆಂಕಟೇಶ್ ಮಾತನಾಡಿ, ಬಡವ್ರ ಮಕ್ಳೂ ಬೇಳಿಬೇಕು ಸಿನಿಮಾ ಪಕ್ಕ ಹಳ್ಳಿ ಸೊಗಡಿನ ಬಡವರು ಅನುಭವಿಸುತ್ತಿರುವ ಕಷ್ಟ ಕರ್ಪಾಣ್ಯಗಳನ್ನು ಒಳಗೊಂಡ ಸಿನಿಮಾವಾಗಿದ್ದು ಮನೆ ಮಂದಿಯೆಲ್ಲ ಕುಳಿತು ನೋಡುವಂತ ಸಿನಿಮಾವಾಗಿದೆ. ಹಣ ಆಸ್ತಿ ಅಂತಸ್ತು ಇರುವ ಎಷ್ಟೋ ಜನ ಶ್ರೀಮಂತರು ಬಡವರ ಮಕ್ಕಳನ್ನು ಬೆಳೆಸದೆ ತಾವು ಮಾತ್ರ ಅಧಿಕಾರ ಅಂತಸ್ತು ಪ್ರತಿಯೊಂದನ್ನೂ ಅನುಭವಿಸುತ್ತಾರೆ. ಹಣವಿರುವ ಶ್ರೀಮಂತರು ಬಡವರ ಮಕ್ಕಳನ್ನು ಬೆಳಸುವ ಪರಿಪಾಠ ಕಲಿಯಬೇಕು ಎಂಬುದು ಸಿನಿಮಾ ಸಂದೇಶ ಸಾರುತ್ತದೆ ಎಂದರು.
ನಿರ್ದೇಶಕ ಮಂಜುಕವಿ ಮಾತನಾಡಿ, ಬಡವ್ರ ಮಕ್ಳೂ ಬೇಳಿಬೇಕು ಸಿನಿಮಾದಲ್ಲಿ ಬರುವ ಮೊದಲು ಹಾಡು ಅಪ್ಪ ಎಂದರೆ ಅಗಸ ಇದು ಅಪ್ಪ ಮಗನ ಸಂಬಂಧ ಬೆಸೆಯುವ ಸೊಗಸಾದ ಹಾಡಾಗಿದೆ. ಮುಂದಿನ ದಿನಗಳಲ್ಲಿ ಎರಡನೇ ಹಾಡು ಬಿಡುಗಡೆಯಾಗಲಿದೆ. ಎಂಟು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಮತ್ತು ಎಡಿಟಿಂಗ್ ಮುಗಿಸಿ ಅಂತಿಮ ಹಂತಕ್ಕೆ ಬಂದಿದೆ. ಜನವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದರು.
