ಉದಯವಾಹಿನಿ, ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮಿಜಿಗಳ ಪ್ರತಿಮೆ ವಿಘ್ನಗೊಳಿಸಲು ಯೇಸು ಕ್ರಿಸ್ತನ ಪ್ರೇರಣೆಯೇ ಕಾರಣ ಎಂದು ಆರೋಪಿ ಕೃಷ್ಣ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನ.30 ರಂದು ಡೆಲಿವರಿ ಬಾಯ್ ಆಗಿ ನಗರದಲ್ಲಿ ಕೆಲಸ ಮಾಡುತ್ತಿರುವ ಆಂಧ್ರ ಮೂಲದ 37 ವರ್ಷದ ಕೃಷ್ಣ ವೀರಭದ್ರನಗರದಲ್ಲಿದಲ್ಲಿರುವ ಶ್ರೀಗಳ ಪ್ರತಿಮೆಯನ್ನು ವಿಘ್ನಗೊಳಿಸಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಆತ ನನ್ನ ಈ ಕಾರ್ಯಕ್ಕೆ ಕನಸಿನಲ್ಲಿ ಯೇಸು ಕ್ರಿಸ್ತ ಬಂದು ಪ್ರತಿಮೆ ವಿಘ್ನ ಮಾಡುವಂತೆ ಪ್ರೇರಿಪಿಸಿದ್ದರಿಂದ ನಾನು ಆ ಕಾರ್ಯ ಮಾಡಿದ್ದೇಣೆ ಎಂದು ಹೇಳಿಕೆ ನೀಡಿದ್ದಾನೆ. ಆಂಧ್ರಪ್ರದೇಶ ಮೂಲದ ಶ್ರೀಕಷ್ಣ ಎಂಬಾತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ತನ್ನ ಕನಸಿನಲ್ಲಿ ಯೇಸುಕ್ರಿಸ್ತನ ದರ್ಶನದಿಂದ ಪ್ರತಿಮೆಯನ್ನು ಧ್ವಂಸಗೊಳಿಸಲು ಪ್ರೇರೇಪಿಸಿರು ವುದಾಗಿ ಹೇಳಿದ್ದಾರೆ. ಈ ವಿರೂಪತೆಯು ಪ್ರದೇಶದಲ್ಲಿ ಪ್ರತಿಭಟನೆಯನ್ನು ಹುಟ್ಟು ಹಾಕಿತು, ನಿವಾಸಿಗಳು ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಕೂಡಲೇ ಕಾರ್ಯಪ್ರವತ್ತರಾದ ಪೊಲೀಸರು ಕಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!