ಉದಯವಾಹಿನಿ, ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಮೊದಲಿಗೆ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ವೀರ ಮಡಿವಾಳ ದೋಭಿ ಘಾಟ್‍ನಲ್ಲಿ ಶಾಸಕರ ಅನುದಾನದಲ್ಲಿ ಮಡಿವಾಳ ಸಮಾಜದ ಅನುಕೂಲಕ್ಕಾಗಿ ಶೆಲ್ಟರ್ ಅಳವಡಿಸಿ ಹೊಸದಾಗಿ ಕಟ್ಟಿಗಳನ್ನು ನಿರ್ಮಿಸಲು 10 ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಿದರು.

ಬಳಿಕ ವಾಡ್ ನಂ.61ರ ವ್ಯಾಪ್ತಿಯ ವಿದ್ಯಾರಣ್ಯಪುರಂನಲ್ಲಿ 50 ಲಕ್ಷ ವೆಚ್ಚದ 2 ಮತ್ತು 4ನೇ ರಸ್ತೆಯ ಅಡ್ಡರಸ್ತೆ ಅಭಿವೃದ್ದಿಗೆ, ಮಧ್ಯಾಹ್ನ ವಾಡ್ ನಂ 51ರ ವ್ಯಾಪ್ತಿಯಲ್ಲಿ ಸುಮಾರು 1.5 ಕೋಟಿ ವೆಚ್ಚದ ರಾಮಾನುಜ 9ನೇ ಮತ್ತು 10ನೇ ಅಡ್ಡರಸ್ತೆ ಹಾಗೂ ಬಿಬಿ ಗಾರ್ಡನ್ ರಸ್ತೆ ಅಭಿವೃದ್ದಿ, ರಾಮಾನುಜ ಮುಖ್ಯರಸ್ತೆ(ಕಂಸಾಳೆ ಮಹದೇವಯ್ಯ ವೃತ್ತದಿಂದ ರಾಮಾನುಜ 8ನೇ ಅಡ್ಡರಸ್ತೆರವರೆಗೆ) ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ತದನಂತರ ವಾಡ್ ನಂ 52ರ ವ್ಯಾಪ್ತಿಯಲ್ಲಿ 2.10 ಲಕ್ಷ ವೆಚ್ಚದ ವಸಂತ್ ಮಹಲ್ ಆವರಣದಲ್ಲಿರುವ ಡಯಟ್ ಸಂಸ್ಥೆಗೆ ಹಾಲಿ ಇರುವ ಮೇಲ್ಪಟ್ಟ ಜಲ ಸಂಗ್ರಹಗಾರದಿಂದ ಹೆಚ್.ಡಿ.ಪಿ.ಇ ಕೊಳವೆ ಮಾರ್ಗದ ಮುಖೇನ ನೀರು ಸರಬರಾಜು ಮಾಡುವ ಕಾಮಗಾರಿಗೆ ಮತ್ತು ವಾಡ್ ನಂ.50ರ ವ್ಯಾಪ್ತಿಯಲ್ಲಿ 18.10 ಲಕ್ಷ ವೆಚ್ಚದ ಸುಣ್ಣದಕೇರಿ 8ನೇ ಕ್ರಾಸ್ ನಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಸತಿ ಗೃಹ ಸಂ.2,3,43,44,45 ಹಾಗೂ ವಾರ್ಡ್ ನಂ 49ರ ವ್ಯಾಪ್ತಿಯ ಬಸವೇಶ್ವರ 3ನೇ ಅಡ್ಡರಸ್ತೆಯಲ್ಲಿ ವಸತಿ ಗೃಹ ಸಂ.2132ರ ದುರಸ್ಥಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!