ಉದಯವಾಹಿನಿ, ಬೆಂಗಳೂರು: ನಗರದಐಟಿಪಿಎಲ್‌ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ “ಸ್ಪರ್ಧಾ-೨೪” ೨೦೨೪ನೇ ಸಾಲಿನ ವಾರ್ಷಿಕರಾಜ್ಯಮಟ್ಟದ ನಾಲ್ಕು ದಿನಗಳ ಕ್ರೀಡಾಕೂಟಇಂದು ಮುಕ್ತಾಯವಾಯಿತು.

ಸಿಎಂಆರ್‌ಐಟಿ ಕ್ರೀಡಾಂಗಣದಲ್ಲಿಡಿಸೆಂಬರ್ ೪ ರಿಂದ ೭ ರವರೆಗೆ ನಡೆದ “ಸ್ಪರ್ಧಾ-೨೦೨೪” ವಾರ್ಷಿಕ ’ರಾಜ್ಯ ಮಟ್ಟದಕ್ರೀಡಾಕೂಟ’ದಲ್ಲಿ ಸಿಎಂಆರ್ ವಿಶ್ವವಿದ್ಯಾಲಯ, ಡಾನ್ ಬಾಸ್ಕೋಐಟಿ, ಸಿದ್ದಗಂಗಾ ಇನ್ಸ್ಟಿಟ್ಯೂಟ್‌ಆಫ್‌ಟೆಕ್ನಾಲಜಿ, ಆಚಾರ್ಯಇನ್ಸ್ಟಿಟ್ಯೂಟ್‌ಆಫ್‌ಟೆಕ್ನಾಲಜಿ ಕಾಲೇಜುಗಳು ಸೇರಿದಂತೆರಾಜ್ಯಾದ್ಯಂತ ೫೨ ಕ್ಕೂ ಹೆಚ್ಚು ಕಾಲೇಜುಗಳಿಂದ ಬೆಂಗಳೂರು ಪ್ರತಿನಿಧಿಸುವ ೨೯ ತಂಡಗಳು, ಹೊರ ಜಿಲ್ಲೆಗಳನ್ನು ಪ್ರತಿನಿಧಿಸುವ ೨೩ ತಂಡಗಳು ಒಟ್ಟು ೧೬೦ ತಂಡಗಳಿಂದ ೨೦೦೦ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಾದ ಫುಟ್ಬಾಲ್,ಕ್ರಿಕೆಟ್,ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಸ್ಪರ್ಧಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆದರು. ಕ್ರೀಡೆಗಳಲ್ಲಿ ಗೆದ್ದು ಬೀಗಿದರು.

ಸ್ಪರ್ಧಾ-೨೦೨೪, ೫ನೇ ಆವೃತ್ತಿಯರಾಜ್ಯ ಮಟ್ಟದಕ್ರೀಡಾಕೂಟದಲ್ಲಿ ಸಿಎಂಆರ್‌ಐಟಿ ತಂಡಗಳು ವಿವಿಧ ವಿಭಾಗಗಳಲ್ಲಿ ಗೆದ್ದುಒಟ್ಟು ೮ ಟ್ರೋಫಿಗಳ ಜೊತೆ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ಡಿಬಿಐಟಿ ಹಾಗೂ ಎಂಎಸ್‌ಆರ್‌ಐಟಿ ತಂಡಗಳು ತಲಾ ೪ ಟ್ರೋಪಿಗಳ ಜೊತೆ ನಗದು ಬಹುಮಾನವನ್ನುಗೆದ್ದು ಬೀಗಿದರು. ಒಟ್ಟಾರೆ ಸ್ಪರ್ಧಿಸಿದ್ದ ಎಲ್ಲಾ ತಂಡಗಳು ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಕ್ರೀಡಾಸ್ಪೂರ್ತಿಯನ್ನು ಉಣಬಡಿಸಿದರು.

Leave a Reply

Your email address will not be published. Required fields are marked *

error: Content is protected !!