ಉದಯವಾಹಿನಿ,ಬೆಂಗಳೂರು: ಮೂವರು ಕುಖ್ಯಾತ ಅಂತಾರಾಜ್ಯ ಸರಗಳ್ಳರನ್ನು ದೊಡ್ಡಬಳ್ಳಾಪುರ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸರು ಮೂವರು ಅಂತಾರಾಜ್ಯ ಪಾತಕಿಗಳನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ, ಮೈಸೂರು, ಆಂಧ್ರಪ್ರದೇಶ ಸೇರಿದಂತೆ ೩೩ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಆಂಧ್ರದಲ್ಲಿ ದರೋಡೆ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸೆ.೧೯ರಂದು ಈ ತಂಡ ದೊಡ್ಡಬಳ್ಳಾಪುರದ ಮೂರು ಕಡೆ ಕಳ್ಳತನ ನಡೆಸಿದೆ. ಮೈಸೂರಿನಲ್ಲಿ ಇದೇ ತಂಡ ಒಂದೇ ಪ್ರದೇಶದಲ್ಲಿ ಮೂರು ಕಳ್ಳತನ ನಡೆಸಿದ್ದಾರೆ. ಮೂವರು ಕಳ್ಳರು ಪೊಲೀಸರಿಂದ ಆಂಧ್ರಕ್ಕೆ ಪರಾರಿಯಾಗುತ್ತಿದ್ದಾಗ ಪಿಐ ಸಾದಿಕ್ ಪಾಷಾ ನೇತೃತ್ವದ ತಂಡ ಬಲೆ ಬೀಸಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರ ವಿರುದ್ಧ ದೂರು ದಾಖಲಿಸಲಾಗಿದೆ.
