ಉದಯವಾಹಿನಿ, ಪಿರಿಯಾಪಟ್ಟಣ : ಕೊಪ್ಪ ಶಾಖೆ ಮಲ್ಲಿನಾಥಪುರ ಗಸ್ತು ವ್ಯಾಪ್ತಿಯ ರಾಮಶೆಟ್ಟಿ ಅವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ದಿನಾಂಕ 06/12/2024 ರ ಸಂಜೆ 10:20 ಗಂಟೆ ಸಮಯದಲ್ಲಿ ಚಿರತೆ ಬಿದ್ದಿದ್ದು ನಂತರ ಸದರಿ ಸ್ಥಳಕ್ಕೆ ಸಿಬ್ಬಂದಿಗಳು ಆಗಮಿಸಿ ಬೋನಿಗೆ ಬಿದ್ದ ಚಿರತೆಯನ್ನು ವಲಯ ಕಚೇರಿಗೆ ತಂದು ದಿನಾಂಕ 07/12/2024 ರಂದು ಬೆಳಿಗ್ಗೆ ಡಾ:ರಮೇಶ್ ಅವರು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಸಂಪೂರ್ಣವಾಗಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಸೆರೆ ಹಿಡಿದ ಸದರಿ ಚಿರತೆಯನ್ನು ಮೇಲಧಿಕಾರಿಗಳ ಆದೇಶದ ಮೇರೆಗೆ ನಾಗರಹೊಳೆ ಬಫರ್ ವಲಯ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು, ಸದರಿ ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಪದ್ಮಶ್ರೀ, ಉಪ ವಲಯ ಅರಣ್ಯಾಧಿಕಾರಿ ಮಧುಸೂದನ್, ಗಸ್ತು ಅರಣ್ಯಪಾಲಕರಾದ ಪೂರ್ಣಿಮಾ, ಯಲಗೂರೇಶ್ ಹಾಜರಿದ್ದರು.
