ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಮ್ಮ ಮೆಟ್ರೋ(BMRCL) ಜಾಲ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಮ್ಮ ಮೆಟ್ರೋ 3ಎ ಹಂತಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನ ನೀಡಿದೆ. ಹಾಗಿದ್ರೆ ನಮ್ಮ ಮೆಟ್ರೋ ಮಾರ್ಗ ಎಲ್ಲಿಯವರೆಗೆ ವಿಸ್ತರಣೆಯಾಗುತ್ತದೆ ಹಾಗೂ ಯಾವೆಲ್ಲಾ ಹೊಸ ನಿಲ್ದಾಣಗಳನ್ನು ಆರಂಭಿಸಲಾಗುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ. ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂಟರ್‌ಸಿಟಿ ಪ್ರಯಾಣವನ್ನು ಹೆಚ್ಚಿಸಿ ಮೂಲಸೌಕರ್ಯವನ್ನು ಒದಗಿಸಲು ನಮ್ಮ ಮೆಟ್ರೋ ಮಾರ್ಗವನ್ನು ಸರ್ಜಾಪುರದಿಂದ ಹೆಬ್ಬಾಳದವರೆಗೆ ಈ 3A ಮಾರ್ಗ ನಿರ್ಮಾಣವಾಗಲಿದೆ. 3A ಮಾರ್ಗವನ್ನು ಕೆಂಪು ಮಾರ್ಗ ಎಂದು ಗುರುತಿಸಲಾಗಿದ್ದು, ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದ ಮಾರ್ಗವಾಗಲಿದೆ. ಎಂದು ಈ ಮಾರ್ಗಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ.
