ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ ಹಳೆ ಸ್ಪರ್ಧಿಗಳು ಬಂದಿದ್ದಾರೆ. ಇದು ಹೊಸದೇನೂ ಅಲ್ಲ. ಈ ಹಿಂದಿನ ಸೀಸನ್‌ಗಳಲ್ಲೂ ಈ ಒಂದು ಕಾನ್ಸೆಪ್ಟ್ (Concept) ಇತ್ತು. ಹಾಗೆ ಇದೀಗ ಕಳೆದ ಸೀಸನ್-೧೦ ರ ಸ್ಪರ್ಧಿಗಳು ದೊಡ್ಡನೆಯಲ್ಲಿ ಕಾಲಿಟ್ಟಿದ್ದಾರೆ. ಆ ಲೆಕ್ಕದಲ್ಲಿ ಸಂತು-ಪಂತು ಬಂದಿದ್ದಾರೆ. ತನಿಷಾ ಕುಪ್ಪಂಡ ಆಗಮಿಸಿದ್ದಾರೆ. ಡೋನ್ ಪ್ರತಾಪ್ ಎಂಟ್ರಿ ಆಗಿದೆ. ಇವರೆಲ್ಲ ಆಗಮನದಿಂದ ಮನೆಯಲ್ಲಿ ಹೊಸ ಉಲ್ಲಾಸ ಕ್ರಿಯೇಟ್ ಆಗಿದೆ. ಮಾವ ಅಂತ ಸಂತು ಅನ್ನು ಹನುಮಂತ ಕರೆದಿದ್ದಾರೆ. ಚುಟು ಚುಟು ಅಂತೈತಿ ಅಂತ ತನಿಷಾ ಜೊತೆಗೂ ಹನುಮಂತ ಕುಣಿದು ಕುಪ್ಪಳ್ಳಿಸಿದ್ದಾರೆ. ದೊಡ್ಡನೆಯಲ್ಲಿರೋ ಜೂನಿಯರ್‌ಗಳಿಗೆ ಹೊಸ ಟಚ್ ಕೊಡೋಕೆ ಈ ಸೀನಿಯರ್ಸ್ ಬಂದಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ . ಮಾವ ಅಂತ ಹೇಳಿ ಮಾನಸಾಳನ್ನೆ ಕಳಿಸಿದಿಯಲ್ಲೋ ಸಿಂಗರ್ ಹನುಮಂತ ಮನೆಯಲ್ಲಿ ಚೆನ್ನಾಗಿಯೇ ಆಡುತ್ತಿದ್ದಾರೆ. ಮನೆಗೆ ಬಂದ ತುಕಾಲಿ ಸಂತುಗೂ ಮಾವ ಅಂತಲೇ ಹನುಮಂತ ಕರೆದಿದ್ದಾರೆ. ಇದರಿಂದ ತುಕಾಲಿ ಕೂಡ ಸಖತ್ ಡೈಲಾಗ್ ಹೊಡೆದಿದ್ದಾರೆ. ಮಾವ ಅಂತ ಹೇಳಿ ಮಾನಸಾಳನ್ನ ಮನೆಗೆ ಕಳಿಸಿದಿಯಲ್ಲೋ ಅಲ್ಲೋ ಅಂತಲೇ ಜೋಕ್ ಮಾಡಿದ್ದಾರೆ.
