ಉದಯವಾಹಿನಿ, ಬೆಂಗಳೂರು: ವಯೋಸಹಜ ಕಾಯಿಲೆಯಿಂದ ನಿಧನರಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಪ್ರಮುಖ ರಾಜಕೀಯ ನಾಯಕರು ಸೇರಿ ಗಣ್ಯರು ಮಾಜಿ ಸಿಎಂ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಈ ನಡುವೆ ಎಸ್.ಎಂ.ಕೃಷ್ಣ ಅವರಿಗೆ ಟೆನಿಸ್ ಕ್ಯಾಪ್ ತೊಡಿಸಿರುವುದು ಕಂಡುಬಂದಿದ್ದು, ಇದಕ್ಕೆ ಕಾರಣವೇನಿರಬಹುದು ಎಂಬ ಕುತೂಹಲ ಅವರ ಬೆಂಬಲಿಗರಲ್ಲಿ ಮೂಡಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಟೆನಿಸ್ ಎಂದರೆ ಪಂಚ ಪ್ರಾಣ. ಜತೆಗೆ ವಸ್ತ್ರವಿನ್ಯಾಸ ಅವರ ನೆಚ್ಚಿನ ಹವ್ಯಾಸವಾಗಿತ್ತು. ಎಸ್.ಎಂ. ಕೃಷ್ಣ ಅವರಿಗೆ ಆಸ್ಟ್ರೇಲಿಯಾದ ಟೆನಿಸ್ ದಿಗ್ಗಜ ಫ್ರಾಂಕ್ ಸೆಡ್ಜ್ ಮನ್ ಎಂದರೆ ಅಚ್ಚುಮೆಚ್ಚು. ಜತೆಗೆ ಬೋರ್ನೆ ಬೋರ್ಗ್, ರೋಜರ್ ಫೆಡರರ್, ಸೈಫಿ ಗ್ರಾಫ್, ಮಾರ್ಟಿನಾ ನವಾಟಿಲೋವಾ, ಗ್ಯಾಬ್ರಿಯಲಾ ಸಬಾಟಿನಿ ಅವರ ಆಟವೆಂದರೆ ಇಷ್ಟ ಇದರ ಜತೆಗೆ ವಿಂಬಲ್ಡನ್ ಎಂದರೆ ಪಂಚಪ್ರಾಣ. ವಿಂಬಲ್ಡನ್ ಪಂದ್ಯಗಳನ್ನು ನೋಡಲು ಆಗಾಗ ಲಂಡನ್ ವಿಮಾನ ಏರುತ್ತಲೇ ಇದ್ದರು.
