ಉದಯವಾಹಿನಿ, ಹೈದರಾಬಾದ್ : ಅಲ್ಲು ಅರ್ಜುನ್ ಅಭಿನಯದ ಪುಷ್ಪ ೨ ದಿ ರೂಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಗಳಿಕೆಯೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ.ಪುಷ್ಪ ೨ ಡಿಸೆಂಬರ್ ೫ ರಂದು ಬಿಡುಗಡೆಯಾಗಿ ಅಂದಿನಿಂದ ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ೧೦೦೦ ಕೋಟಿ ರೂ.ಗಿಂತ ಹೆಚ್ಚು ಮತ್ತು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ರೂ. ೭೦೦ ಕೋಟಿಗಿಂತ ಹೆಚ್ಚು ಗಳಿಸಿದೆ. ಪುಷ್ಪ ೨ ಬಾಕ್ಸ್ ಆಫೀಸ್‌ನಲ್ಲಿ ಒಂದು ವಾರವನ್ನು ಪೂರೈಸಿದೆ.
ಅಲ್ಲು ಅರ್ಜುನ್ ಬಗ್ಗೆ ಟಿವಿಯ ಜನಪ್ರಿಯ ಧಾರಾವಾಹಿ ಶಕ್ತಿಮಾನ್‌ನಿರ್ಮಾಪಕ ಮತ್ತು ನಟ ಮುಖೇಶ್ ಖನ್ನಾ ಅವರು ಶಕ್ತಿಮಾನ್ ಪಾತ್ರಕ್ಕೆ ಅಲ್ಲು ಅರ್ಜುನ್ ಸೂಕ್ತ ವ್ಯಕ್ತಿ.ಅಚ್ಚುಕಟ್ಟಾಗಿ -ಶಕ್ತಿಯುತವಾಗಿ ನಿರ್ವಹಿಸಬಲ್ಲರು ಎಂದಿದ್ದಾರೆ. ಡಿಸೆಂಬರ್ ೧೩ ರಂದು, ಮುಖೇಶ್ ಖನ್ನಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅಲ್ಲು ಅರ್ಜುನ್ ಶಕ್ತಿಮಾನ್ ಪಾತ್ರ ಮಾಡುವ ಕುಊ ಜನರಿಂದ ಸಲಹೆಗಳನ್ನು ಕೇಳಿದ್ದಾರೆ.
ಮುಖೇಶ್ ಖನ್ನಾ ತಮ್ಮ ಪೋಸ್ಟ್‌ನಲ್ಲಿ, ಅಲ್ಲು ಅರ್ಜುನ್ ಶಕ್ತಿಮಾನ್ ಆಗಬಹುದೇ? ನಿನ್ನೆ ಚಿತ್ರಮಂದಿರಕ್ಕೆ ಹೋಗಿ ಪುಷ್ಪ ೨ ಚಿತ್ರ ನೋಡಿದಾಗ ಈ ಪ್ರಶ್ನೆ ನನ್ನ ಮನಸ್ಸಿಗೆ ಬಂದಿದೆ, ನನಗೆ ಉತ್ತರ ಸಿಕ್ಕಿದೆ, ಈ ಕುರಿತು ಯೋಚಿಸಬಹುದು, ಅವರು ಸಕಾರಾತ್ಮಕ ಮುಖ ಹೊಂದಿದ್ದಾರೆ, ಅವರು ಚಿಕ್ಕ ವಯಸ್ಸಿನಉತ್ತಮ ಶಕ್ತಿಯುತ ನಟ ಆದರೆ ನೆನಪಿರಲಿ ಅವನು ಶಕ್ತಿಮಾನ್ ಆಗುತ್ತಾನೆ ಎಂದು ನಾನು ಹೇಳಿಲ್ಲ, ನಾನು ಈಗ ಯೋಚಿಸುತ್ತಿದ್ದೇನೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿ, ಇಲ್ಲಿಯವರೆಗೆ ಯಾರು ಶಕ್ತಿಮಾನ್ ಆಗುತ್ತಾರೆ ಎಂಬುದು ಜ್ವಲಂತ ಪ್ರಶ್ನೆಯಾಗಿ ಉಳಿದಿದೆ, ಅದು ಎಷ್ಟು ಬೇಗ ತಿಳಿಯುತ್ತದೆ, ಎಲ್ಲರಿಗೂ ಉತ್ತಮವಾಗಿದೆ, ಏಕೆಂದರೆ ಇಡೀ ದೇಶ ಶಕ್ತಿಮಾನ್ ಬರುವಿಕೆಗಾಗಿ ಕಾಯುತ್ತಿದ್ದೇನೆ.
