ಉದಯವಾಹಿನಿ, ಕೋಲಾರ: ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಇರುವಂತ ಸ್ವಾತಂತ್ರ್ಯ ಹಾಗೂ ಹಕ್ಕುಗಳಿವೆ. ಮುಸ್ಲಿಂ ಸಮುದಾಯದವರು ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ. ನಮ್ಮ ಜನ್ಮ ಭೂಮಿಯು ಇದೆ, ನಮ್ಮ ಕರ್ಮ ಭೂಮಿಯೂ ಇದೆ ಅಗಿದೆ. ರಾಜಕೀಯ ಲಾಭಕ್ಕಾಗಿ ಹಿಂದು ಮುಸ್ಲಿಂ ಎಂಬ ಭೇದ ಭಾವ ಸೃಷ್ಠಿಸ ಬೇಡಿ, ರಾಜ್ಯದಲ್ಲಿ ಹಿಂದು ಮುಸ್ಲಿಂ ಎಂಬ ಭೇದ ಭಾವ ಇಲ್ಲದೆ ಅಣ್ಣ ತಮ್ಮಂದಿರಂತೆ ಶಾಂತಿ ನೆಮ್ಮದಿಯ ಬಾಳ್ವೆ ಮಾಡುತ್ತಿದ್ದೇವೆ.ಡಾ,ಬಿ,.ಆರ್,ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲರೂ ಹೋಗೋಣಾ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮದ್ ತಿಳಿಸಿದರು,
ಬೆಳಗಾವಿಯ ವಿಧಾನ ಪರಿಷತ್ ಅಧಿವೇಶನದಲ್ಲಿ ಮುಸ್ಲಿಂ ಸಮುದಾಯದವರನ್ನು ಒಲೈಸಿ ಕೊಳ್ಳಲು ರಾಜ್ಯದಲ್ಲಿ ಆಸ್ತಿಗಳು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂಬ ಬಿಜೆಪಿ ಪಕ್ಷದ ಪ್ರಚಾರಕ್ಕೆ ಪ್ರತಿಕ್ರಿಯಿಸಿ ವಿಪಕ್ಷದ ನಾಯಾಯ ಛಲವಾದಿ ನಾರಾಯಣಸ್ವಾಮಿ ಅವರನ್ನು ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ೨೧ ಸಾವಿರ ಆಸ್ತಿಗಳನ್ನು ವಕ್ಫ್ ಸಂಸ್ಥೆಗೆ ಮಾಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಅದರೆ ರಾಜ್ಯದಲ್ಲಿ ವಕ್ಫ್ ಸಂಸ್ಥೆ ಹೆಸರಿನಲ್ಲಿ ಎಲ್ಲೂ ಒಂದು ಅಡಿ ಭೂಮಿಯೂ ಇಲ್ಲ. ವಕ್ಫ್ ಸಂಸ್ಥೆಯ ಅಡಿಯಲ್ಲಿರುವ ವಿದ್ಯಾಸಂಸ್ಥೆಗಳು, ಅಂಜುಮಾನ್, ದರ್ಗಗಳು, ಈದ್ಗ್‌ಗಳು, ವೃದ್ದಾಶ್ರಮಗಳು, ವಿದ್ಯಾರ್ಥಿ ನಿಲಯಗಳು, ಮಸೀದಿಗಳು, ಮದರಸಗಳು, ಇತ್ಯಾದಿಗಳ ಹೆಸರಿನಲ್ಲಿ ಆಸ್ತಿಗಳು ಇದೆ ವಕ್ಫ್ ಸಂಸ್ಥೆಯು ಇವುಗಳ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹಾಗೂ ಏನಾದರೂ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ಇತ್ಯಾರ್ಥ ಪಡೆಸಲಿದೆ ಹೊರತಾಗಿ ವಕ್ಫ್ ಸಂಸ್ಥೆಯ ಕಚೇರಿಯೂ ಸಹ ಅದರ ಹೆಸರಿನಲ್ಲಿ ಇರುವುದಿಲ್ಲ ಎಂದರು.
