ಉದಯವಾಹಿನಿ , ಕೋಲಾರ: ದೇವನೂರು ಮಹದೇವರವರಿಗೆ ವೈಕಂ ಪ್ರಶಸ್ತಿ ನೀಡಿರುವುದನ್ನು ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಶಾಖೆ ಆತ್ಮೀಯವಾಗಿ ಅಭಿನಂದಿಸುತ್ತದೆ.
ಘಟನೆ ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಶಾಖೆಯು ತಮಿಳು ನಾಡು ಸರ್ಕಾರಕ್ಕೆ ಮತ್ತು ಅಭಿನಂದನೆಗೆ ಬಾಜನರಾದ ದೇವನೂರು ಮಹದೇವರವರಿಗೆ ಸಂಘಟನೆ ಗೌರವಪೂರ್ವಕವಾಗಿ ಶುಭ ಕೋರುತ್ತೆ.
ತಾಲ್ಲೂಕು ಮುರಾರ್ಜಿ ವಸತಿ ಶಾಲೆಯಿಂದ ಹಮ್ಮಿಕೊಂಡಿದ್ದ ಪ್ರವಾಸದಲ್ಲಿ ೪ ಜನ ವಿದ್ಯಾರ್ಥಿನಿಯರು ಮುರುಡೇಶ್ವರ ಬೀಚ್‌ನಲ್ಲಿ ಮುಳಗಿ ಸಾವನ್ನಪ್ಪಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ ಹಾಲಿ ಸರ್ಕಾರ ಘೋಷಿಸಿರುವ ೫ ಲಕ್ಷರೂಗಳ ಜೊತೆಗೆ ಆರ್ಥಿಕ ನೆರವಿಗಾಗಿ ಮತ್ತೆ ೨೦ ಲಕ್ಷ ರೂಗಳ ಬಿಡುಗಡೆ ಮಾಡುವ ಮೂಲಕ ಅವರ ಕುಟುಂಬಕ್ಕೆ ಸರ್ಕಾರದಿಂದ ಜಮೀನು ಮಂಜೂರು ಮಾಡಿ ಕುಟುಂಬದ ಒಬ್ಬರಿಗೆ ನೌಕರಿನೀಡುವ ಮೂಲಕ ಅವರ ಸಂಕಟವನ್ನು ದೂರಗೊಳಿಸಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಕೆಂಬೋಡಿ ರವೀಂದ್ರಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ವಡಗೇರೆ ಮುನಿಯಪ್ಪ ಹನುಮಂತಪ್ಪ.ಬಿ, ದಾನವಳ್ಳಿ ಗಾಂಧಿನಗರ ರಾಘವೇಂದ್ರ ಪ್ರಸಾದ್, ಮತ್ತಿಕುಂಟೆ ನಾರಾಯಣಸ್ವಾಮಿ, ಜಿಲ್ಲಾ ಖಜಾಂಚಿ, ಗಂಗಮ್ಮನಪಾಳ್ಯ ಶ್ರೀನಿವಾಸ, ಚೆನ್ನರಾಯಪುರ ಮಂಜುನಾಥ್, ಆರಾಭಿಕೊತ್ತನೂರು ವೆಂಕಟೇಶ್, ವಡಗೇರಿ ಮಂಜುನಾಥ್ ತಿಳಿಸಿದ್ದಾರೆ.
