ಉದಯವಾಹಿನಿ , ಹನೂರು : ತಾಲೂಕಿನ ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಸುವ್ಯವಸ್ಥಿತ ರಸ್ತೆ ಇಲ್ಲದೇ ವಾಹನ ಸಂಚಾರ ದುಸ್ತರವಾಗಿದೆ. ದಿನನಿತ್ಯ ವಾಹನ ಸಂಚಾರರ ಪರಿಪಾಟಲು ಹೇಳತಿರದಂತಾಗಿದ್ದು ಮಲೆ ಮಾದಪ್ಪನೆ ಕಾಪಾಡಬೇಕು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವು ಮಲೆ ಮಹ ದೇಶ್ವರರು ತಪೋಗೈದು ನೆಲೆಸಿರುವ ಪುಣ್ಯಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ ೧೦ ರಿಂದ ೧೫ ಸಾವಿರ ಜನರು, ನೂರಾರು ವಾಹನಗಳು ಸಂಚರಿಸುತ್ತವೆ.
ಸರ್ಕಾರಿ ರಜೆ ಮತ್ತು ವಾರಾಂತ್ಯಗಳಲ್ಲಿ ಸುಮಾರು ೩೦ ಸಾವಿರದಷ್ಟು ಭಕ್ತರು ಮತ್ತು ಎಣ್ಣೆಮಜ್ಜನ ಸೇವೆ ಹಾಗೂ ಅಮಾವಾಸ್ಯೆ ದಿನಗಳಂದು ಸುಮಾರು ೪೦ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಾರೆ. ಶ್ರೀ ಕ್ಷೇತ್ರದ ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರಾ ಮಹೋತ್ಸವಗಳಲ್ಲಿ ೫ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಶ್ರೀ ಕ್ಷೇತ್ರದತ್ತ ಆಗಮಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!