ಉದಯವಾಹಿನಿ, ಬಳ್ಳಾರಿ : ತಾಲೂಕಿನ ಸಂಕನಕಲ್ಲು ಪ್ರಾಗೈತಿಹಾಸಿಕ ಬೆಟ್ಟದ ಬಳಿ ಪೂರ್ವದ ಜಮೀನಿನಲ್ಲಿ ಇದ್ದ ಐದು ಸಾವಿರ ವರ್ಷಗಳ ಹಿಂದಿನ ಬೂದಿಗುಡ್ಡವನ್ನು. ಜಮೀನಿನ ರೈತ ನೆಲಸಮ ಮಾಡಲು ಮುಂದಾಗಿದ್ದಾನೆ.
ಈ ಪ್ರದೇಶದಲ್ಲಿ ಈ ಮೊದಲು ಮೂರು ಬೂದಿ ಗುಡ್ಡಗಳು ಇದ್ದವು. ಅವುಗಳಲ್ಲಿ ಎರೆಡು ಈಗಾಗಲೆ ನಾಶವಾಗಿದ್ದು. ಈಗ ಒಂದು ಮಾತ್ರ ಉಳಿದಿತ್ತು.
ಆದರೆ ಈ ಜಮೀನಿನ ಮಾಲೀಕ ಈ ಬೂದಿಗುಡ್ಡವನ್ನು ನೆಲ ಸಮಮಾಡಲು ಮುಂದಾಗಿದ್ದಾನೆ. ಕೇಳಿದರೆ ಇಲ್ಲಿದ್ದ ಕುಣಿಯನ್ನು ಮುಚ್ಚಲಾಗುತ್ತಿದೆ. ಜಮೀನಿ ವಿಸ್ತರಣೆ ಕಾರ್ಯಕ್ಕೆ ಎಂದು ಹೇಳುತ್ತಿದ್ದಾನಂತೆ.‌ಇನ್ನೊಂದು ಮೂಲದ ಪ್ರಕಾರ ಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸುವ ಪ್ರಯತ್ನ ಇದಾಗಿದೆ ಎನ್ನಲಾಗುತ್ತಿದೆ.
ನಗರದಲ್ಲಿನ ಸಂಗನಕಲ್ಲು ಮ್ಯೂಸಿಯಂ ನಿರ್ವಹಣೆ ಮಾಡುತ್ತಿರುವವರು ಸದ್ಯ ಬೂದಿಗುಡ್ಡ ನೆಲ ಸಮ ಮಾಡುವ ಕಾರ್ಯವನ್ನು ಅರ್ದಕ್ಕೆ ನಿಲ್ಲಿಸಿದ್ದಾರಂತೆ.
ಈ ಬಗ್ಗೆ ಎಇಸಿ.ಎಡಿಸಿ ಅವರಿಗೆ ಹಾಗು ರಾಜ್ಯ ಪುರತತ್ವ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರಂತೆ. ಮುಂದೆ ಏನಾಗುತ್ತೆ ದಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!