ಉದಯವಾಹಿನಿ, ಚಾಮರಾಜನಗರ : ಡಿ.೧೮ ರಂದು ನಟ ಶಿವರಾಜ್ ಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ಅವರು ಪತ್ನಿ ಗೀತಾ ಅವರೊಂದಿಗೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದಾರೆ.
ದಂಪತಿಗಳು ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದಾರೆ. ಗಣಪತಿ ದೇವಸ್ಥಾನ, ಮಧ್ಯರಂಗ ಮತ್ತು ಮೀನಾಕ್ಷಿ ಮತ್ತು ಸೋಮೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಶ್ರೀಚಕ್ರ ದರ್ಶನ ಮಾಡಿ ಆದಿಶಕ್ತಿ ಮಾರಮ್ಮ ದೇವಸ್ಥಾನಕ್ಕೆ ಮಡಿಲು ತುಂಬಿದ್ದಾರೆ.
ಮುನ್ನ ನಟ ಶಿವರಾಜ್‌ಕುಮಾರ್ ಮತ್ತು ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಡಿ ಅರ್ಪಿಸಿದ್ದಾರೆ.
