ಉದಯವಾಹಿನಿ, ಕೋಲಾರ : ವೆಂಕಟ ಮುನಿಯಪ್ಪನವರು ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ಕೆಲಸ ನಿರ್ವಹಿಸಿದರು. ಅಧಿಕಾರ ಇರಲಿ ಬಿಡಲಿ ಚುನಾವಣೆಯಲ್ಲಿ ಸೋಲಿನ ನಡುವೆಯೂ ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದ್ದರು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ. ವೆಂಕಟ ಮುನಿಯಪ್ಪನವರ ಪ್ರಥಮ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಮಾನವನಾದ ಮೇಲೆ ಲೋಪದೋಷಗಳು ಸಹಜವಾದರೂ ವೆಂಕಟಮುನಿಯಪ್ಪನವರು ಸದಾಕಾಲ ಜನರ ನಡುವೆಯೇ ಇರುತ್ತಿದ್ದರು ಎಂದರು.
ವೇಮಗಲ್ ಕ್ಷೇತ್ರದಿಂದ ನಮ್ಮ ತಂದೆಯವರಾದ ಸಿ.ಬೈರೇಗೌಡರು ನಂತರದಲ್ಲಿ ನನ್ನ ವಿರುದ್ದ ಚುನಾವಣೆಯಲ್ಲಿ ಸ್ವರ್ಧಿಸಿದ್ದರು. ರಾಜಕಾರಣದ ಧೃವೀಕರಣದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದ ಅನಿವಾರ್ಯ ಸಂದರ್ಭದಲ್ಲಿ ಎಷ್ಟೆ ಒತ್ತಡಗಳ ನಡುವೆಯೋ ನನ್ನ ಪರವಾಗಿ ಚುನಾವಣೆಯಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದರು, ವ್ಯಕ್ತಿಗಿಂತ ಪಕ್ಷಕ್ಕೆ ಹೆಚ್ಚಿನ ಅದ್ಯತೆ ನೀಡಿ ಎಲ್ಲರೊಂದಿಗೆ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಕೆಲಸ ಮಾಡುತ್ತಿದ್ದರು.ವೆಂಕಟಮುನಿಯಪ್ಪ, ವಿ.ಆರ್. ಸುದರ್ಶನ್, ನಸ್ಸೀರ್ ಆಹಮದ್ ಮುಂತಾದವರು ಕೆಲಸ ಮಾಡುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವು ಮಜಾಭೂತವಾಗಿದೆ ಎಂದರು.
