ಉದಯವಾಹಿನಿ, ಬೆಳಗಾವಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಎಐಸಿಸಿ ಕುಟುಂಬದ ಒಡೆತನಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಸಿಎ ನಿವೇಶನ ನೀಡಿರುವ ವಿಚಾರ ವಿಧಾನಪರಿಷತ್ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಸಿ.ಟಿ.ರವಿ ಅವರು ಕೆಐಎಡಿಬಿ ವತಿಯಿಂದ ಸಿಎ ನಿವೇಶನ ಹಂಚಿಕೆ ಕುರಿತು ಪ್ರಶ್ನೆ ಮಾಡಿದರು. ಈ ವೇಳೆ ಸಿಎ ನಿವೇಶನ ಹಂಚಿಕೆ ಮಾಡಲು ಇರುವ ಮಾನ ದಂಡಗಳೇನು?, ಕಾಲ ಕಾಲಕ್ಕೆ ಇವು ಬದಲಾಗುತ್ತವೆ. ನಿವೇಶನ ಹಂಚಿಕೆ ಕುರಿತು ಯಾವ ಪತ್ರಿಕೆಗೆ ಜಾಹೀರಾತು ಕೊಟ್ಟಿದ್ದೀರಿ, ನಿಯಮ ಪಾಲನೆ ಬಗ್ಗೆ ಜನರ ಕಣ್ಣಿಗೆ ಮಣ್ಣೆರೆಚಲು ಜಾಹೀರಾತು ನೀಡಿದ್ದೀರಾ? ಎಂದು ಪ್ರಶ್ನಿಸಿದರು. ಸಿಎ ನಿವೇಶನ ಪಡೆದು ಶಾಲೆ, ಸಮುದಾಯ ಭವನ, ಆಸ್ಪತ್ರೆ ನಿರ್ಮಾಣ ಮಾಡಬೇಕು. ಅಪಾರ್ಟ್ಮೆಂಟ್ ಮತ್ತು ಹೋಟೆಲ್ ನಿರ್ಮಾಣ ಮಾಡುವುದು ಕಮರ್ಷಿಯಲ್ ಆಗುವುದಿಲ್ಲವೇ?, ಇವೆಲ್ಲಾ ಕೈಗಾರಿಕಾ ಸಿಎ ನಿವೇಶನ ವ್ಯಾಪ್ತಿಗೆ ಬರುತ್ತದೆಯೇ? ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್, ಸಿಎ ನಿವೇಶನ ಹಂಚಿಕೆಗಳ ಕುರಿತಂತೆ ನಮ ಸರ್ಕಾರ ಹೊಸದಾಗಿ ನಿಯಮಗಳನ್ನು ಮಾಡಿಲ್ಲ. 1991 ರಲ್ಲಿಯೇ ಇದು ಇದೆ. 2023 ರಲ್ಲಿ ಅಂತಿಮ ಅಧಿಸೂಚನೆಯಾಗಿದೆ. ಇದರ ಪ್ರಕಾರ, ಸಿಎ ನಿವೇಶನದಲ್ಲಿ ಹೋಟೆಲ್ಗಳು, ಆಸ್ಪತ್ರೆ, ಕೈಗಾರಿಕಾ ಪಾರ್ಕ್ಗಳಲ್ಲಿ ಅಪಾರ್ಟ್ಮೆಂಟ್, ಕಾಂಪ್ಲೆಕ್‌್ಸ ನಿರ್ಮಿಸಿಕೊಳ್ಳುತ್ತಾರೆ.
