ಉದಯವಾಹಿನಿ, ಕುಷ್ಟಗಿ: ಮೋಡವಿಲ್ಲ. ಮಳೆಯೂ ಇಲ್ಲ ಆದರೂ ಬತ್ತಿದ ಹಳ್ಳಗಳಲ್ಲಿ ಜುಳುಜುಳು ನಿನಾದ. ಕೆರೆಗಳು, ಕೃಷಿ ಹೊಂಡಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ, ಹರಿವ ನೀರಲ್ಲಿ ಪ್ರಾಣಿ ಪಕ್ಷಿಗಳ ಸ್ವಚ್ಚಂದ ವಿಹಾರ. ಹೌದು, ಇವು ಕಥೆ, ಕವನದ ಸಾಲುಗಳಲ್ಲ. ತಾಲ್ಲೂಕಿನ ಶಾಖಾಪುರ, ಮದಲಗಟ್ಟಿ ಮತ್ತಿತರೆ ಪ್ರದೇಶಗಳ ವ್ಯಾಪ್ತಿಯಲ್ಲಿ ನೀಲಾಕಾರದ ಜೀವಜಲ ಓಲಾಡುವ ದೃಶ್ಯ ಇದಕ್ಕೆಲ್ಲ ಕಾರಣ ಕೃಷ್ಣಯ ಕೃಪೆ ಕೃಷ್ಣಾ ಬಿ ಂ ಯೋಜನೆಯಲ್ಲಿ ರೈತರ ಹೊಲಗಳಿಗೆ ಇನ್ನೂ ನೀರು ಬಂದಿಲ್ಲವಾದರೂ ಯೋಜನೆಯ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಲ್ಲಿ ಬರದ ನಾಡಿನ ಕೆರೆಗಳಲ್ಲಿ ಜೀವಜಲ ಧುಮ್ಮಿಕ್ಕುತ್ತಿದೆ.
ಕೆರೆಗಳ ಆಸುಪಾಸಿನ ಹಳ್ಳಿಗಳ ರೈತರು, ಜನರ ಸಂತಸಕ್ಕೆ ಪಾರವೇ ಇಲ್ಲ. ತಾಲ್ಲೂಕಿನ ಜೊತೆಗೆ ಪಕ್ಕದ ಯಲಬುರ್ಗಾ, ಕನಕಗಿರಿ ತಾಲ್ಲೂಕಿನ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ‘ಕೃಷ್ಣಾ ಭಾಗ್ಯ ಜಲ ನಿಗಮ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ತಾಲ್ಲೂಕಿನ ಹೊಲಗೇರಾ ಶಾಖೆಯ 10 ಕೆರೆಗಳ ಪೈಕಿ 9. ಹನುಮಸಾಗರ ಶಾಖೆಯ ಯಲಬುಣಚಿ, ಕಲಾಲಬಂಡಿ ಶಾಖೆಯ ಶಾಖಾಪುರ ಸೇರಿದಂತೆ ಬಹುತೇಕ ಕೆರೆಗಳಿಗೆ ನೀರು ಹರಿಯುತ್ತಿದೆ. ವಿದ್ಯುತ್ ಇತರೆ ತಾಂತ್ರಿಕ ಅಡತಡೆ ಹೊರತುಪಡಿಸಿದರೆ ಕಳೆದ ಒಂದು ವಾರದಿಂದಲೂ ಸತತವಾಗಿ ನೀರು ಹರಿದುಬರುತ್ತಿದೆ’ ಎಂದು ಹೂಲಗೇರಾ ಬ್ರಾಂಚಿನ ಕೆಬಿಜೆಎನ್ಎಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ನಾಯಕ ವಿವರಿಸಿದರು.
ಕೃಷ್ಣಾ ನೀರಿನಿಂದ ಹಳ್ಳಕ್ಕೆ ಜೀವಕಳೆಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ.
