ಉದಯವಾಹಿನಿ, ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಉಯಿಲು (ವಿಲ್) ಉಲ್ಲಂಘನೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಅಕ್ರಮ ನಿಯಂತ್ರಿಸಲು ಉಯಿಲು ಮಾಡುವ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ನೋಂದಣಿ ಸಂಬಂಧ ಕಾಯಿದೆಗಳಿಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬಳ್ಳಾರಿ ಜಿಲ್ಲೆಯ ಕುಡಿತಿನಿ ಗ್ರಾಮದ ಕುಟುಂಬವೊಂದರ ವಿಲ್ ವ್ಯಾಜ್ಯದ ವಿಚಾರಣೆಯನ್ನು ಧಾರವಾಡ ಪೀಠದಲ್ಲಿ ನಡೆಸಿದ ನ್ಯಾ.ಅನಂತರಾಮ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ವಿಲ್ ಮಾಡುವವರು ಸಾಕ್ಷಿಗಳ ಹೇಳಿಕೆ ಸೇರಿ ಇಡೀ ಉಯಿಲು ನೋಂದಣಿ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಬೇಕು. ಅಲ್ಲದೆ, ವಿಲ್ ದಾಖಲು ಪ್ರಕ್ರಿಯೆಯು ಸಂಪೂರ್ಣವಾಗಿ ಬದಲಾವಣೆಯಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಸೂಚನೆ ನೀಡಿತು.
