ಉದಯವಾಹಿನಿ, ಬೆಂಗಳೂರು: ಅಧಿವೇಶನದ ವೇಳೆ ಮಾತಿನ ಚಕಮಕಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾನ್ಸರ್ ವಿರುದ್ಧ ಸಿ.ಟಿ.ರವಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂಬ ಆರೋಪದ ಮೇಲೆ (C.T.Ravi Arrest)ಬಂಧಿಸಿಲಾಗಿದ್ದು, ಬೆಳಗಾವಿ ಕೋರ್ಟ್ ಬಳಿಕ ಇದೀಗ ಬೆಂಗಳೂರಿಗೆ ಕರೆ ತರಲಾಗುತ್ತದೆ. ನ್ಯಾಯಾಧೀಶ ಸ್ಪರ್ಶಾ ಡಿಸೋಜಾ ನೇತೃತ್ವದಲ್ಲಿ ವಿಚಾರಣೆ ನಡೆದ ಬಳಿಕ ಬೇಲ್ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ವರ್ಗಾವಣೆ ಮಾಡಿದೆ. ಬೆಂಗಳೂರಿನ ಸಿಸಿಎಚ್ 82ನೇ ಕೋರ್ಟ್ ಪ್ರಕರಣ ವರ್ಗಾವಣೆಯಾಗಿದೆ. ಅಲ್ಲದೆ, ಗೌರವದಿಂದ ಆರೋಪಿಯನ್ನು ಕರೆದುಕೊಂಡು ಹೋಗಬೇಕು. 24 ಗಂಟೆಯೊಳಗೆ ಆರೋಪಿಯನ್ನು ಕೋರ್ಟ್ ಹಾಜರು ಪಡಿಸಬೇಕು ಎಂದು ಸೂಚನೆ ನೀಡಿದೆ.
ಸಿ.ಟಿ ರವಿಯನ್ನು ಬೆಂಗಳೂರಿಗೆ ಕರೆ ತರಲಾಗುತ್ತದೆ. ಬೆಳಗಾವಿ ಕೋರ್ಟ್‌ನಲ್ಲಿ ಹೇಳಿದ್ದೇನು…? ಇನ್ನು ಬೆಳಗಾವಿ ಜಿಲ್ಲಾ 5ನೇ ಹೆಚ್ಚುವರಿ ನ್ಯಾಯಾಲದದಲ್ಲಿ ಸದ್ಯ ಸಿ.ಟಿ ರವಿ ಪರ ವಕೀಲ ಎಂ.ಬಿ.ಜಿರಲಿ ವಾದ ಮಂಡಿಸಿದ್ದಾರೆ. ಈ ವೇಳೆ ಸಿಟಿ ರವಿ ಪೊಲೀಸರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ. ಪೊಲೀಸರಿಂದ ನನಗೆ ಜೀವ ಬೆದರಿಕೆ ಇದೆ ಅಂತ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ರವಿ ಪರ ವಕೀಲರು ಮಧ್ಯಂತರ ಜಾಮೀನು ಕೊಡುವಂತೆ ಮನವಿ ಮಾಡಿದ್ದು, 3 ಗಂಟೆಗೆ ತೀರ್ಪು ಕಾಯ್ದಿರಿಸಲಾಗಿತ್ತು. ಆದರೆ ಕೋರ್ಟ್‌ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ವರ್ಗಾವಣೆ ಮಾಡಿದೆ
