ಉದಯವಾಹಿನಿ, ಕಲಬುರಗಿ: ಪತ್ನಿ ಮತ್ತು ಅವರ ಮನೆಯವರು ಸೇರಿ ಮನೆ ಬೀಗ ಮುರಿದು 1.20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ, ಮನೆ ಲೋನಿನ ಹೆಚ್.ಡಿ.ಎಫ್.ಸಿ.ಬ್ಯಾಂಕಿನ ದಾಖಲಾತಿಗಳನ್ನು ಕಳವು ಮಾಡಿದ್ದಾರೆ ಎಂದು ಪತಿಯೊಬ್ಬ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಮುಖ್ಯ ಪೇದೆಯಾಗಿರುವ ತಾರಾಸಿಂಗ್ ನಾಯ್ಕ್ ಎಂಬುವವರೆ ದೂರು ಸಲ್ಲಿಸಿದ್ದು, ಪತ್ನಿ ಶೀಮಾ ರಾಠೋಡ್, ಅವರ ಸಹೋದರ ಪವನಕುಮಾರ ಚವ್ಹಾಣ್, ತಾಯಿ ಸುನೀತಾಬಾಯಿ ಚವ್ಹಾಣ್, ತಂದೆ ಸುಭಾಶ್ಚಂದ್ರ ಚವ್ಹಾಣ್, ಸಹೋದರಿ ಮಮತಾ ಚವ್ಹಾಣ್ ಅವರು ಸೇರಿ ಮನೆ ಬೀಗ ಮುರಿದು 15 ಗ್ರಾಂ.ತೂಕದ ಸುತ್ತುಂಗುರ, 20 ತೊಲೆಯ ಬೆಳ್ಳಿ ಗಣಪತಿ, ಲಕ್ಷ್ಮೀ ಮೂರ್ತಿಗಳು, ಲಕ್ಷ್ಮೀದೇವಿ ಪಾದ ಹಾಗೂ ಲಕ್ಷ್ಮೀಯ ಮುಖ ಹೀಗೆ ಒಟ್ಟು 1.20 ಲಕ್ಷ ರೂ.ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ಮನೆ ಲೋನಿನ ಹೆಚ್.ಡಿ.ಎಫ್.ಸಿ.ಬ್ಯಾಂಕಿನ ದಾಖಲಾತಿಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
