ಉದಯವಾಹಿನಿ, ಕೆ.ಆರ್.ಪುರ: ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಜಯದೇವ ಆಸ್ಪತ್ರೆ ಖ್ಯಾತ ಹೃದ್ರೋಗ ತಜ್ಞ ವೈದ್ಯ ಡಾ.ಹೆಚ್.ಎಸ್.ನಟರಾಜ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.
ಕೆ.ಆರ್.ಪುರ ಸಮೀಪದ ಕೆ.ವಿ.ಬಡಾವಣೆಯಲ್ಲಿ ಕೆ.ಆರ್.ಪುರ ಬಲಿಜ ವೆಲ್ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಳವಾಗಿ ಕಾಣಿಸಿಕೊಳ್ಳುತ್ತಿದ್ದು ಆನೇಕ ಜನರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಾದ ಕಾರಣ ಹೃದಯಾಘಾತ ಸಂಭವಿಸಿ ಮೃತಪಟ್ಟಿರುತ್ತಾರೆ. ಪ್ರತಿದಿನ ಜಯದೇವ ಆಸ್ಪತ್ರೆಗೆ ಸಾವಿರಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಕಾಯಿಲೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಎಷ್ಟೇ ಕೆಲಸದ ಒತ್ತಡವಿದ್ದರೂ ಯಾವುದೇ ಕಾರಣಕ್ಕೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದರು.ರಕ್ತದೊತ್ತಡ, ಕೊಲೆಸ್ಟರಾಲ್ ಪರೀಕ್ಷೆ, ಅರ್ಥೋಪೇಡಿಕ್, ಕಣ್ಣಿನ ಪರೀಕ್ಷೆ, ಸೀಳು ತುಟಿ ಪರೀಕ್ಷೆ, ಇಸಿಜಿ, ಮಧುಮೇಹ, ಕ್ಯಾನ್ಸರ್ ಪರೀಕ್ಷೆಗಳು ಮುಂತಾದ ಪರೀಕ್ಷೆಗಳು ನಡೆದವು. ಶಿಬಿರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಕೆ.ಆರ್.ಪುರ ಬಲಿಜ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕರಾದ ಸರಸ್ವತಮ್ಮ, ಅಮರಜ್ಯೋತಿ ಮೋಹನ್, ಕೆ.ಎನ್.ರಮೇಶ್, ಅಧ್ಯಕ್ಷ ಶ್ರೀರಾಮ್,ಮುಖಂಡರಾದ ಶಿವಪ್ಪ, ಗಿರೀಶ್ ಇದ್ದರು.
