ಉದಯವಾಹಿನಿ, ಬೆಂಗಳೂರು: ಇಬ್ಬರು ಗಾರೆ ಕೆಲಸಗಾರರ ನಡುವೆ ಮೊಬೈಲ್ ವಿಚಾರಕ್ಕೆ ಜಗಳ ನಡೆದು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿ.ಕೆ.ಅಚ್ಚಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ನರಸೀಪುರ ತಾಲ್ಲೂಕಿನ ಶ್ರೀನಿವಾಸ(45) ಕೊಲೆಯಾದ ಗಾರೆಕೆಲಸಗಾರರ. ಆರೋಪಿ ನಾಗರಾಜ ಪರಾರಿಯಾಗಿದ್ದಾನೆ. ಶ್ರೀನಿವಾಸ ಮತ್ತು ನಾಗರಾಜ ಟಿ.ನರಸೀಪುರ ತಾಲ್ಲೂಕಿನ ತಾಯೂರು ನಿವಾಸಿಗಳಾಗಿದ್ದು, ಇವರಿಬ್ಬರೂ ಕತ್ರಿಗುಪ್ಪೆಯ ಶ್ರೀನಿವಾಸನಗರದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು. ಇವರಿಬ್ಬರೂ ಒಂದೇ ಊರಿನವರಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದರು.ಸಂಜೆ 6.30ರ ಸಮಯದಲ್ಲಿ ಕೆಲಸ ಮುಗಿಸಿಕೊಂಡು ರೂಮ್ಗೆ ಬಂದಿದ್ದಾರೆ. ಆ ವೇಳೆ ನಾಗರಾಜನ ಮೊಬೈಲ್ನ್ನು ಶ್ರೀನಿವಾಸ ತೆಗೆದುಕೊಂಡನೆಂದ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ.

ಗಲಾಟೆ ವಿಕೋಪಕ್ಕೆ ಹೋದಾಗ ನಾಗರಾಜು ನೀರಿನ ಹೀಟರ್(ಕಾಯಿಲ್)ನ್ನು ತೆಗೆದುಕೊಂಡು ಶ್ರೀನಿವಾಸನಿಗೆ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಕ್ಕಪಕ್ಕದವರು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಆರೋಪಿ ನಾಗರಾಜನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!