ಉದಯವಾಹಿನಿ, ಅರಸೀಕೆರೆ: ನಗರದ ಕಾಟೀಕೆರೆ ಗ್ರಾಮದ ಸಮೀಪ ಗಾಂಜಾ ಸೊಪ್ಪು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ನಗರದ ಪುಜ್ವಲ್, ಪೃಥ್ವಿ ಹಾಗೂ ಗಗನ್ ಎಂಬುವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಚಂದ್ರಶೇಖರ್, ಸಬ್ ಇನ್‌ಸ್ಪೆಕ್ಟರ್ ಶಿವಾನಂದ ನಿಂಗಪ್ಪ ರದ, ನಾಗರಾಜ್ ಎಚ್.ಕೆ.ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನ, ಒಂದು ಮೊಬೈಲ್ ಪೋನ್ ಹಾಗೂ 13 ಲಕ್ಷ ಮೌಲ್ಯದ 15.28 ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ರಂಗಸ್ವಾಮಿ, ಹರೀಶ್, ಶಿವರಾಜ್, ವಸಂತ್, ಕುಮಾರ್, ಗಿರೀಶ್, ರ್ಪೀಖಾನ್, ವೇದಮೂರ್ತಿ ಭಾಗವಹಿಸಿದ್ದರು.
