ಉದಯವಾಹಿನಿ, ಬೆಂಗಳೂರು: ಒಂಟಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಮೂವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿ ೧೨೦ ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ೧ ದ್ವಿ-ಚಕ್ರ ವಾಹನ ಸೇರಿ ೯.೫೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ಚಿಕ್ಕಜಾಲ ತರಬನಹಳ್ಳಿಯ ಮಹಿಳೆಯೊಬ್ಬರು ಮನೆಯ ಕಾಂಪೌಂಡ್ ಒಳಗೆ ಹಾಕಿದ್ದ ರಾಗಿಯನ್ನು ಚೀಲದಲ್ಲಿ ತುಂಬುತ್ತಿರುವಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮನೆಯ ಒಳಗಡೆ ಎಳೆದುಕೊಂಡು ಹೋಗಿ, ಚಾಕು ತೋರಿಸಿ, ಕತ್ತಿನಲ್ಲಿದ್ದ ಸುಮಾರು ೧೨೦ ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಚಿಕ್ಕಜಾಲ ಪೊಲೀಸರು ನಾರಾಯಣಹಳ್ಳಿ ಗ್ರಾಮದ ಚೆನ್ನಸಂದ್ರದ ಮುಖ್ಯರಸ್ತೆಯಲ್ಲಿ ಮೂವರು ವ್ಯಕ್ತಿಗಳನ್ನು ಒಂದು ದ್ವಿ-ಚಕ್ರ ವಾಹನ ಸಮೇತ ಬಂಧಿಸಿ ೧೨೦ ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದರ

ರೆಸಾರ್ಟ್ ನಲ್ಲಿ ಕಳವು: ಇದೇ ಪೊಲೀಸರು ರೆಸಾರ್ಟ್ ನಲ್ಲಿ ಕಳವು ಮಾಡಿದ್ದ ಕಳ್ಳನನ್ನು ಬಂಧಿಸಿ ೩.೧೦ ಲಕ್ಷ ಮೌಲ್ಯದ ೫೩ ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಲೈಪ್ ಇನ್ನೂರೆಷನ್ಸ್ ಕಂಪನಿಯಲ್ಲಿ ಕ್ಲಸ್ಟರ್ ಬಿಜಿನೆಸ್ ಹೆಡ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಕಳೆದ ಡಿ.೧೨ ರಂದು ಬೆಳಿಗ್ಗೆ ಕಂಪನಿಯ ಮೀಟಿಂಗ್ ಸಲುವಾಗಿ ಸಾದಹಳ್ಳಿ ಗೇಟ್ ಹತ್ತಿರವಿರುವ ರೆಸಾರ್ಟ್‌ವೊಂದಕ್ಕೆ ಬಂದಿರುತ್ತಾರೆ. ಮೀಟಿಂಗ್ ಮುಗಿದ ಬಳಿಕ ಪಿರಾದುದಾರರು ಮತ್ತು ಸಹೋದ್ಯೋಗಿಗಳು ರೆಸಾರ್ಟ್ ನಲ್ಲಿಯೇ ಉಳಿದುಕೊಂಡಿದ್ದು, ಪಿರಾದುದಾರರು ರಾತ್ರಿ ಮಲಗುವ ಸಮಯದಲ್ಲಿ ಸುಮಾರು ೫೦ ಗ್ರಾಂನ ಚಿನ್ನದ ಮಾಂಗಲ್ಯ ಸರ ಸುಮಾರು ೦೮ ಗ್ರಾಂನ ೨ ಉಂಗುರಗಳು ಹಾಗೂ ವಾಚನ್ನು ಬಿಚ್ಚಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!