ಉದಯವಾಹಿನಿ, ನವದೆಹಲಿ: ಹೊಸ ವರ್ಷದ ಮೊದಲ ತಿಂಗಳಿನಲ್ಲೇ ಸೆಂಟ್ರಲ್ ಗೌರ್ಮೆಂಟ್ ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗುತ್ತಾ..? ಕೇಂದ್ರ ಸರ್ಕಾರೀ ನೌಕರರು, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯುವ ಕ್ಯಾಬಿನೆಟ್ ಮೀಟಿಂಗ್ ನಿರ್ಧಾರವನ್ನು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕೇಂದ್ರ ಸರ್ಕಾರೀ ನೌಕರರ ಡಿಎ ಹೆಚ್ಚಳದ ಶೆಡ್ಯೂಲ್ ಮುಂದಿನ ವರ್ಷದ ಜನವರಿಯಲ್ಲಿ ನಿಗದಿಯಾಗಿದೆ. ಡಿಎ ಹೆಚ್ಚಳದ ಅಧಿಕೃತ ಘೋಷಣೆ ಮಾಡುವ ಮುನ್ನ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಪರಿಷ್ಕೃತ ಸಂಖ್ಯೆಗಾಗಿ ಕೇಂದ್ರ ಹಣಕಾಸು ಇಲಾಖೆ ಕಾಯಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಪ್ರಕ್ರಿಯೆಯು ವಿಳಂಬವಾಗುತ್ತಿರುವ ಹಿನ್ನಲೆ, ಪರಿಷ್ಕೃತ ತುಟ್ಟಿಭತ್ಯೆಯ ಘೋಷಣೆ ಕೂಡಾ ಸ್ವಲ್ಪದಿನದ ಮಟ್ಟಿಗೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ವರ್ಷಕ್ಕೊಮೆ ಕಾಸ್ಟ್ ಆಫ್ ಲೀವಿಂಗ್ ಆಧರಿಸಿ, ಜನವರಿ ಮತ್ತು ಜೂನ್ ತಿಂಗಳಲ್ಲಿ ಡಿಎ ಹೆಚ್ಚಳ ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಪದ್ದತಿ.
ಪ್ರತೀ ವರ್ಷ ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳುವಂತೆ, ಅಂದರೆ ಜುಲೈ – ಜೂನ್ ಅವಧಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕದ ಶೇಕಡಾವಾರು ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ಇದರ ಆಧಾರದ ಮೇಲೆ ಪ್ರತೀ 6 ತಿಂಗಳಿಗೊಮೆ ಡಿಎ ಮೊತ್ತವನ್ನು ಪರಿಷ್ಕೃತಗೊಳಿಸಲಾಗುತ್ತದೆ. ಇದಾದ ನಂತರ, ಹೆಚ್ಚಳವಾದ ಡಿಎ ಮೊತ್ತವನ್ನು ಕೆಲವು ತಿಂಗಳ ಬಳಿಕ ಕೇಂದ್ರ ಹಣಕಾಸು ಇಲಾಖೆ ಪ್ರಕಟಿಸಿ, ಬಾಕಿ ಸಮೇತ ವೇತನದಲ್ಲಿ ಸೇರಿಸಿ ಕೊಡಲಾಗುತ್ತದೆ.
