ಉದಯವಾಹಿನಿ, ಹೊಸದಿಲ್ಲಿ : ನಿಖರವಾಗಿ ಒಂದು ದಶಕದ ಹಿಂದೆ, ಮನಮೋಹನ್‌ಸಿಂಗ್ ಸಿಂಗ್ ಅವರು ಪ್ರಧಾನಿ ಹುದ್ದೆಯಲ್ಲಿದ್ದು 2014ರ, ಜನವರಿ 3ರಂದು ನಡೆಸಿದ ಕಟ್ಟಕಡೆಯ ಪತ್ರಿಕಾಗೋಷ್ಠಿಯಲ್ಲಿ ನೂರಕ್ಕೂ ಅಧಿಕ ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಬೇಕಾಯಿತು. ಈ ಪತ್ರಿಕಾಗೋಷ್ಠಿಯು ಪ್ರಸಕ್ತ ರಾಜಕೀಯ ದೃಶ್ಯಾವಳಿಗಿಂತ ತೀರಾ ವ್ಯತಿರಿಕ್ತವಾದುದಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿರಲಿಲ್ಲವೆಂಬುದು ಇಲ್ಲಿ ಗಮನಾರ್ಹವಾಗಿದೆ. ಮನೋರಂಜನೆ ಅಪರಾಧ ಪ್ರಯಾಣ ఆలా ಆ ಪತ್ರಿಕಾಗೋಷ್ಠಿಯಲ್ಲಿ ಮನಮೋಹನ್‌ಸಿಂಗ್ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತನ್ನ ಆಡಳಿತಾವಧಿಯಲ್ಲಿ ಕೈಗೊಳ್ಳಲಾದ ಯೋಜನೆಗಳು, ಸುಧಾರಣೆಗಳನ್ನು ಅವರು ಬಲವಾದಗಿ ಸಮರ್ಥಿಸಿದರು. ತಾನೋರ್ವ ದುರ್ಬಲ ಪ್ರಧಾನಿ ಮತ್ತು ಮಾತನಾಡಲು ಹಿಂದೇಟು ಹಾಕುವವ ಎಂಬ ಟೀಕೆಗಳನ್ನು ಅವರು ತಳ್ಳಿಹಾಕಿದರು.
“ಮಾಧ್ಯಮಗಳಿಗೆ ಬೆದರುವ ಪ್ರಧಾನಿ ನಾನಲ್ಲ ಸಮಕಾಲೀನ ಮಾಧ್ಯಮಗಳು ಹಾಗೂ ಸಂಸತ್ ನಲ್ಲಿರುವ ಪ್ರತಿಪಕ್ಷಗಳಿಗಿಂತ ಇತಿಹಾಸವು ನನ್ನ ಬಗ್ಗೆ, ಹೆಚ್ಚು ದಯಾಳುವಾಗಿರುವುದು ಎಂದು ನಾನು ನಂಬುತ್ತೇನೆ” ಎಂದು ಸಿಂಗ್ ಹೇಳಿದ್ದರು. ಪತ್ರಿಕಾಗೋಷ್ಠಿಯಲ್ಲಿ ಡಾ. ಸಿಂಗ್ ಅವರು 62 ಪೂರ್ವರಚಿತವಲ್ಲದ ಪ್ರಶ್ನೆಗಳಿಗೆ ಉತ್ತರಿಸಿದರು.
