ಉದಯವಾಹಿನಿ, ಕುಣಿಗಲ್: ಸ್ವಾಗತ ನಾಮಫಲಕ್ಕೆ ಖಾಸಗಿ ಬಸ್ ವೊಂದು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟು 8 ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ತಾಲೂಕಿನ ಅಂಚೇಪಾಳ್ಯ ಬಳಿ ಡಿ.28ರ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಮಂಗಳೂರು ಬಿ.ಸಿ. ರೋಡ್ ನಿವಾಸಿ, ಬಸ್ ಚಾಲಕ ಮಹಮ್ಮದ್ ಇಬ್ರಾಹಿಂ (40) ಮೃತಪಟ್ಟವರು.
ಪ್ರಯಾಣ ಖಾಸಗಿ ಬಸ್ ಉಡುಪಿಯ ಸುಭಾಷ್ ನಗರದಿಂದ ಶುಕ್ರವಾರ ರಾತ್ರಿ 7.45 ಕ್ಕೆ ಬೆಂಗಳೂರು ಕಡೆಗೆ ಹೊರಟ್ಟಿತ್ತು. ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಸ್ವಾಗತ ಕೊರುವ ನಾಮಫಲಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಮೃತಪಟ್ಟು, ಸುಮಾರು 8 ಮಂದಿ ಗಾಯಗೊಂಡಿದ್ದಾರೆ.
