ಉದಯವಾಹಿನಿ, ಬೆಂಗಳೂರು : ರಾಜ್ಯದ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ೨೦೨೫ರ ವರ್ಷ ಎಲ್ಲರಿಗೂ ಹರ್ಷ ತರಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ.ಗ್ಯಾರಂಟಿಯಿಂದ ಹೆಚ್ಚಾಗಲಿ ಜನರ ಬಲ, ಕರ್ನಾಟಕವಾಗಲಿ ಇನ್ನಷ್ಟು ಸಬಲ.”ಹೊಸ ವರ್ಷದ ಈ ಶುಭ ಘಳಿಗೆಯನ್ನು ಹೊಸ ಉತ್ಸಾಹದೊಂದಿಗೆ ಆರಂಭಿಸಿ. ನಿಮ್ಮ ಕನಸುಗಳನ್ನು ಈಡೇರಿಸುವತ್ತ ನಿಮ್ಮ ಪಯಣ ಯಶಸ್ವಿಯಾಗಿ ಸಾಗಲಿ. ರಾಜ್ಯದಲ್ಲಿ ಈ ವರ್ಷವೂ ಮಳೆ, ಬೆಳೆ ಉತ್ತಮವಾಗಲಿ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲಿ. ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳಿಂದ ೨೦೨೪ ರಲ್ಲಿ ಜನ ಸಾಮಾನ್ಯರ ಬದುಕಿನಲ್ಲಿ ಅಸಾಮಾನ್ಯ ಬದಲಾವಣೆ ಉಂಟಾಗಿದೆ. ಇದರ ಜತೆಗೆ ರಾಜ್ಯದ ಸಮಗ್ರ ಕಲ್ಯಾಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಎಲ್ಲಾ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಲಿದೆ.
