ಉದಯವಾಹಿನಿ, ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಬರೋಬ್ಬರಿ ೩೦೮ ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗಿದೆ.
ಅಬಕಾರಿ ಇಲಾಖೆಯು ೨೫೦ ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ನಿರೀಕ್ಷೆಗೂ ಮೀರಿ ಮಾರಾಟವಾಗಿದೆ.
ಕಳೆದ ವರ್ಷ ೨೦೨೩ ರ ಡಿಸೆಂಬರ್ ೩೧ ರಂದು ೧೯೩ ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತು. ೨೦೨೪ ಡಿಸೆಂಬರ್ ೩೧ ರಂದು ೭,೩೦೫ ಮದ್ಯ ಮಾರಾಟಗಾರರು ಕೆಎಸ್?ಬಿಸಿಎಲ್??ನಿಂದ ಮದ್ಯ ಖರೀದಿ ಮಾಡಿದ್ದಾರೆ.
ಐಎಂಎಲ್ ೪,೮೩,೭೧೫ ಲಕ್ಷ ಬಾಕ್ಸ್ ಮಾರಾಟದಿಂದ ೨೫೦.೨೫ ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್- ೨,೯೨,೩೩೯ ಲಕ್ಷ ಬಾಕ್ಸ್ ಮಾರಾಟದಿಂದ ೫೭,೭೫ ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು ೭,೭೬,೦೪೨ ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು ೩೦೮ ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ. ಹೆಚ್ಚಿದ್ದ ಮದ್ಯ ಮಾರಾಟ: ೨೭-೧೨-೨೦೨೪ ರ ಶುಕ್ರವಾರದಂದು ಕೂಡ ಬರೋಬ್ಬರಿ ೪೦೮.೫೮ ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗಿತ್ತು. ಐಎಂಎಲ್ ೬,೨೨,೦೬೨ ಲಕ್ಷ ಬಾಕ್ಸ್ ಮಾರಾಟದಿಂದ ೩೨೭,೫೦ ಕೋಟಿ ರೂ ಆದಾಯ ಸಂಗ್ರಹವಾಗಿತ್ತು.ಬಿಯರ್ ೪,೦೪,೯೯೮ ಲಕ್ಷ ಬಾಕ್ಸ್ ಮಾರಾಟದಿಂದ ೮೦,೫೮ ಕೋಟಿ ರೂ ಆದಾಯ ಗಳಿಕೆಯಾಗಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- ೧೦,೨೭,೦೬೦ ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ೪೦೮.೫೦ ಕೋಟಿ ರುಪಾಯಿ ಆದಾಯ ಹರಿದುಬಂದಿತ್ತು.

Leave a Reply

Your email address will not be published. Required fields are marked *

error: Content is protected !!