ಉದಯವಾಹಿನಿ, ಕೆ.ಆರ್.ನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಬಗ್ಗೆ ಅಸಹನೆ ಮತ್ತು ದ್ವೇಷದ ಮಾತುಗಳನ್ನಾಡಿರುವ ಕೇದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ ದೇಶ ದ್ರೋಹ ಕಾಯಿದೆ ಅಡಿಯಲ್ಲಿ ಬಂಧಿಸಲು ಒತ್ತಾಯಿಸಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ರವರು ಪ್ರಭಲವಾಗಿ ಪ್ರತಿಪಾದಿಸಿ ಕಟ್ಟಿಕೊಟ್ಟ ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನುತ ವೇದಿಕೆಯಾದ ಸಂಸತ್ತಿನಲ್ಲಿ ನಿಂತು ಬಿಜೆಪಿ ಸರ್ಕಾರದ ಗೃಹ ಮಂತ್ರಿ ಅಮಿತ್ ಷಾ ಸಂವಿಧಾನ ಕುರಿತ ಚರ್ಚೆಯ ಸಂದರ್ಭದಲ್ಲಿ ಕೆಲವರಿಗೆ ಅಂಬೇಡ್ಕರ್- ಅಂಬೇಡ್ಕರ್-ಅಂಬೇಡ್ಕರ್-ಅಂಬೇಡ್ಕರ್ ಎಂದು ಹೆಸರು ಹೇಳುವುದೇ ಪ್ಯಾಷನ್ ಆಗಿದ್ದು. ಇದು ವ್ಯಸನವಾಗಿ ಬಿಟ್ಟಿದೆ. ಅಂಬೇಡ್ಕರ್ ಹೆಸರಿಗೆ ಬದಲಾಗಿ ದೇವರ ಹೆಸರನ್ನಾದರೂ ಇಷ್ಟು ಬಾರಿ ಹೇಳಿದ್ದರೆ ಅವರಿಗೆ ಏಳೇಳು ಜನ್ಮಗಳಿಗೆ ಸ್ವರ್ಗ ಲಭಿಸುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಬಗೆಗಿನ ತಮ್ಮ ಅಸಹನೆ ಹೊರ ಆಕಿದ್ದಾರೆ ಎಂದು ಕಿಡಿಕಾರಿದರು.
ತನ್ನ ಸಂಘ ಪರಿವಾರದ ಎಂದಿನ ತೀವ್ರ ಅಸಹನೆ-ದ್ವೇಷ ಹಾಗೂ ದಲಿತ ಸಮುದಾಯದ ಬಗ್ಗೆ ಆರ್.ಎಸ್‍ಎಸ್-ಬಿಜೆಪಿಗಿರುವ ಅಸಡ್ಡೆ ಮತ್ತು ತುಚ್ಚಿ ಭಾವನೆಯನ್ನು ಹೊರ ಹಾಕಿರುವ ಅಮಿತ್ ಷಾ ತನ್ನ ಈ ಕೀಳು ಮಟ್ಟದ ಹೇಳಿಕೆಯನ್ನು ಈ ಕೂಡಲೇ ಹಿಂಪಡೆಯಬೇಕು ಹಾಗೂ ಅಂಬೇಡ್ಕರ್ ಪ್ರತಿಮೆ ಎದುರು ಮಂಡಿಯೂರಿ ಕುಳಿತು ದೇಶದ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತದೆ.
