ಉದಯವಾಹಿನಿ,  ಕಡೂರು: ತೆಂಗಿನ ಕಾಯಿ ಬೆಲೆ ಏರುಗತಿಯಲ್ಲಿ ಮುಂದುವರಿದಿದೆ. ಮಾರುಕಟ್ಟೆಯಿಂದ ಚಿಲ್ಲರೆಯಾಗಿ ಖರೀದಿಸುವ ಗ್ರಾಹಕರು ಬೆಲೆ ಕೇಳಿ ಸುಸ್ತಾಗುತ್ತಿದ್ದಾರೆ. ಉತ್ತಮ ಧಾರಣೆ ಇರುವುದರಿಂದ ಕಾಯಿ ವ್ಯಾಪಾರಿಗಳು ನೇರವಾಗಿ ತೆಂಗಿನ ತೋಟಕ್ಕೆ ಹೋಗಿ, ಬೆಳೆಗಾರರ ಬಳಿ ಕಾಯಿ ವ್ಯಾಪಾರ ಕುದುರಿಸುತ್ತಿದ್ದಾರೆ. ತೋಟದಲ್ಲೇ ಕಾಯಿ ಮಾರಾಟ ಮಾಡಿದರೆ ಕಾಯಿ ಕೆಡವುವ, ಸುಲಿಯುವ ಖರ್ಚು ಇಲ್ಲ. ಹಾಗಾಗಿ ಕೆಲ ರೈತರು ತೋಟದಲ್ಲೇ ಕಾಯಿ ಮಾರಾಟಕ್ಕೆ ಒಲುವು ತೋರಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ತೆಂಗು ಬೆಳೆದಿರುವ ರೈತರು ಎಪಿಎಂಸಿಯಲ್ಲಿ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ. ಬೇಸಿಗೆ ಆರಂಭವಾಗಿದ್ದು, ಎಳನೀರಿಗೂ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಗುಣಮಟ್ಟದ ತೆಂಗಿನ ಕಾಯಿ ಲಭ್ಯತೆ ಕಡಿಮೆಯಾಗಿದೆ. ಕೆಲವು ವ್ಯಾಪಾರಿಗಳು ತೆಂಗಿನಕಾಯಿಯನ್ನು ತೂಕದಲ್ಲಿ ಖರೀದಿಸುತ್ತಾರೆ. ಕಡೂರು ಎಪಿಎಂಸಿಯಲ್ಲಿ ಒಂದು ಕ್ವಿಂಟಲ್‌ ಗೆ ₹4500 ರಿಂದ ₹5400ರ ತನಕ ಬೆಲೆ ಲಭಿಸಿದೆ.

 

Leave a Reply

Your email address will not be published. Required fields are marked *

error: Content is protected !!