ಉದಯವಾಹಿನಿ, ರಾಮನಗರ: ನಗರದ ಹೊರವಲಯದಲ್ಲಿರುವ ರಂಗಾರಾಯನದೊಡ್ಡಿ ಕೆರೆಯ ಬಳಿ ಶುಕ್ರವಾರ ಬೆಳಿಗ್ಗೆ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಕೆರೆ ಏರಿ ಮೇಲ್ಮಾಗದ ಬಂಡೆ ಹಾಗೂ ಅಕ್ಕಪಕ್ಕದ ಜನವಸತಿ ಸ್ಥಳಗಳ ಬಳಿ ಓಡಾಡಿದ ಕಾಡಾನೆಗಳು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿದವು. ಕೆರೆಯ ಕೆಳ ಭಾಗದಲ್ಲಿ ಓಡಾಡುತ್ತಿದ್ದ ಒಡಾಡುತ್ತಿದ್ದ ಆನೆಗಳನ್ನು ಕಂಡ ವಾಯುವಿಹಾರಿಗಳು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಇಲಾಖೆ ಸಿಬ್ಬಂದಿ, ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದರು.
ರಂಗರಾಯನದೊಡ್ಡಿ ಕೆರೆಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶದ ಆನೆಗಳು ಹೆಜ್ಜೆ ಹಾಕಿದವು. ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
