ಉದಯವಾಹಿನಿ,ಔರಾದ : ಆಕಸ್ಮಿಕವಾಗಿ ಕಬ್ಬಿನ ಗದ್ದೆಯಲ್ಲಿನ ವಿದ್ಯುತ್ ಕಂಬದಲ್ಲಿ ವಿದ್ಯುತ್ ಸ್ಪರ್ಶ ಉಂಟಾದ ಪರಿಣಾಮವಾಗಿ ಬೆಂಕಿ ಅವಘಡಕ್ಕೆ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಹೆಡಗಾಪೂರ ಗ್ರಾಮದಲ್ಲಿ ನಡೆದಿದೆ.
ಹೆಡಗಾಪೂರ ಗ್ರಾಮದ ಸರ್ವೆ ನಂ.07ರ ಸಿದ್ಧಮ್ಮ ಸಿದ್ದಪ್ಪ ಎಂಬುವವರಿಗೆ ಸೇರಿದ 3.20 ಎಕರೆ ಕಬ್ಬು ಹಾನಿಯಾಗಿದ್ದು, ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಕಬ್ಬು ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಿದರು. ಜೆಸ್ಕಾಂ ಅಧಿಕಾರಿಗಳು ಹಾಗೂ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂದಾಜು 4 ಲಕ್ಷದ ಕಬ್ಬು ನಷ್ಟವಾಗಿದೆ. ಠಾಣಾ ಕುಶನೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
