ಉದಯವಾಹಿನಿ, ಮಂಗಳೂರು: ನಗರದ ಹೊರವಲಯದ ಜಪ್ಪಿನಮೊಗರುವಿನಲ್ಲಿರುವ ಗುಜರಿ ಅಂಗಡಿಗೆ ಭಾನುವಾರ ರಾತ್ರಿ ಬೆಂಕಿ ಹೊತ್ತುಕೊಂಡಿದ್ದು, ಅದರೊಳಗಿದ್ದ ಪರಿಕರಗಳು ಸುಟ್ಟು ಕರಕಲಾಗಿವೆ. ಜೆಪ್ಪಿನಮೊಗರು ನೌಶೀರ್ ಅವರಿಗೆ ಸೇರಿದ ಈ ಅಂಗಡಿ ಇದಾಗಿದೆ. ಗುಜರಿ ಸಾಮಗ್ರಿಗಳು ಹಾಗೂ ಹಳೆಯ ಪೀಠೋಪಕರಣಗಳು ಅಂಗಡಿಯಲ್ಲಿದ್ದವು ಎಂದು ಪಾಂಡೇಶ್ವರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಯ ಮೂಲಗಳು ತಿಳಿಸಿವೆ. ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾರಿಸಿ ಬೆಂಕಿ ನಂದಿಸಿದವು. ‘ಈ ಮಳಿಗೆ ನೌಶೀರ್ ಅವರಿಗೆ ಸೇರಿದ್ದು ಬಳಸಿದ ಪೀಠೋಪಕರಣಗಳನ್ನು ಹಾಗೂ ಗುಜರಿ ಸಾಮಾಗ್ರಿಗಳನ್ನು ಖರೀದಿಸಿ ಅವರು ಮಾರಾಟ ಮಾಡುತ್ತಾರೆ. ಇಂತಹ ಪೀಠೋಪಕರಣಗಳು, ಕೆಲ ಗುಜರಿ ಸಾಮಗ್ರಿಗಳು ಸೇರಿದಂತೆ ಸುಮಾರು ₹25 ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟುಹೋಗಿವೆ ಎಂದು ಅಂದಾಜಿಸಲಾಗಿದೆ’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದರು
