ಉದಯವಾಹಿನಿ, ಬೆಂಗಳೂರು: ಜಾತಿ ಜನಗಣತಿ ವಿಚಾರವಾಗಿ ಎದುರಾದ ಪ್ರಶ್ನೆಯೊಂದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದ್ದಾರೆ.ನಗರದ ತಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವಿಚಾರವಾಗಿ ಶೋಷಿತ ವರ್ಗಗಳ ಬೇಡಿಕೆಗಳ ಕುರಿತು ಪ್ರಶ್ನೆ ಎದುರಾದಾಗ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು.
ದೆಹಲಿಯ ವಿಧಾನಸಭೆಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಉತ್ತಮವಾದ ಪ್ರಚಾರ ಕಾರ್ಯವನ್ನು ಆಂತರಿಕವಾಗಿ ನಡೆಸುತ್ತಿದೆ. ಆದರೆ ಫಲಿತಾಂಶ ಕಾದುನೋಡಬೇಕು ಎಂದು ಹೇಳಿದರು.
ನಾವು ಅಬ್ಬರದ ಪ್ರಚಾರ ಮಾಡುತ್ತಿಲ್ಲ. ಒಳಗೊಳಗೇ ನಮ ಕೆಲಸವನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಜನ ನಮನ್ನು ಬೆಂಬಲಿಸುವ ನಿರೀಕ್ಷೆಯಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳೆರಡೂ ಉಳಿಯಬೇಕು.
