ಉದಯವಾಹಿನಿ, ಮಹಾಕುಂಭನಗರ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಮಾಘ ಅಷ್ಟಮಿ ಮತ್ತು ಭೀಷಾ ಅಷ್ಟಮಿಯ ಶುಭ ಸಂದರ್ಭಗಳಲ್ಲಿ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಕೇಸರಿ ಸ್ವೆಟ್‌ಶರ್ಟ್ ಮತ್ತು ಟ್ರ್ಯಾಕ್‌ಸೂಟ್‌ನಲ್ಲಿ ಧರಿಸಿದ್ದ ಪ್ರಧಾನಿ ಮೋದಿ ಆರತಿ ನೀಡುವ ಮೊದಲು ತ್ರಿವೇಣಿ ಸಂಗಮದಲ್ಲಿ ರುದ್ರಾಕ್ಷಿ ಮಣಿಗಳನ್ನು ಹಿಡಿದುಕೊಂಡು, ಸಂಸ್ಕೃತ ಮಂತ್ರಗಳನ್ನು ಪಠಿಸುತ್ತಾ ಪ್ರಾರ್ಥನೆ ಸಲ್ಲಿಸಿದರು.
ಧಾರ್ಮಿಕ ಸ್ನಾನವನ್ನು ಮಾಡಿದ ನಂತರ, ಪ್ರಧಾನಿ ಮೋದಿ ಅವರು ಹಲವಾರು ಅಖಾರಾಗಳ ಸಂತರ ಸಭೆಯನ್ನು ಉದ್ದೇಶಿಸಿ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡಿದರು.ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿ ವಿಹಾರ ತೆರಳಿ ಪವಿತ್ರ ಸ್ನಾನ ಮಾಡಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.ಎಕ್‌್ಸ ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ರಿಜಿಜು, ಮಹಾ ಕುಂಭವು 144 ವರ್ಷಗಳಿಗೊಮೆ ಬರುತ್ತದೆ, ಅಂದರೆ ಅನೇಕ ತಲೆಮಾರುಗಳಿಗೆ ಒಮ್ಮೆ. ಯಾರೂ ಇಂತಹ ಐತಿಹಾಸಿಕ ಧಾರ್ಮಿಕ ಕ್ಷಣದಲ್ಲಿ ರಾಜಕೀಯ ಮಾಡಬಾರದು.ನಾನು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು ನನ್ನ ಅದಷ್ಟ. ದಯವಿಟ್ಟು ಎಲ್ಲರೂ ಮಾರ್ಗಸೂಚಿಗಳನ್ನು ಅನುಸರಿಸಿ, ಮಹಾಕುಂಭಕ್ಕೆ ಬರುವ ಒಟ್ಟು ಸಂಖ್ಯೆ ಅಭೂತಪೂರ್ವವಾಗಿದೆ ಮತ್ತು ಮಹಾಕುಂಭ ಅಭೂತಪೂರ್ವವಾಗಿದೆ ಎಂದು ಹೇಳಿದ್ದಾರೆ.
