ಉದಯವಾಹಿನಿ, ತಾಳಿಕೋಟೆ: ತಾಲೂಕಿನ ಕೊಡಗಾನೂರಿನ ಜೆ.ಎಸ್.ಎಸ್. ಶಾಲೆಯಲ್ಲಿ ಪಾಲಕರ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಸಾಹೇಬಗೌಡ ಎಸ್. ಗಬಸಾವಳಗಿಯವರು ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಲಾಟರಿ ಮೂಲಕ ಒಬ್ಬರು ಅದೃಷ್ಟಶಾಲಿ ಪಾಲಕರನ್ನು ಆಯ್ಕೆ ಮಾಡಲಾಯಿತು. ಅದೃಷ್ಟಶಾಲಿ ಪಾಲಕರಾಗಿ ಶ್ರೀಮತಿ ನಿರ್ಮಲಾ ಸಿದ್ದಯ್ಯ ಬಾನ್ಯಾಳಮಠ ಅವರು ಆಯ್ಕೆಯಾದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಕಾರ್ಯದರ್ಶಿಗಳಾದ ಸಾಹೇಬಗೌಡ ಎಸ್. ಗಬಸಾವಳಗಿಯವರು ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರು ಮತ್ತು ಶಿಕ್ಷಕರು ಕೈಜೋಡಿಸಿ ಶ್ರಮಿಸಿಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಶಿಕ್ಷಣದ ಜೋತೆಗೆ ಮಾನವೀಯ ಮೌಲ್ಯಗಳು ಅಷ್ಟೆ ಮುಖ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಶಿಕ್ಷಕರ ಜೋತೆ ಚರ್ಚಿಸಿದರು. ನಂತರ ಶಾಲಾ ಮೈದಾನದಲ್ಲಿ ಪಾಲಕರಿಗಾಗಿ ತಮ್ಮ ಬಾಲ್ಯದ ನೆನಪುಗಳನ್ನು ಮರುಕಳಿಸುವ ಆಟೋಟಗಳನ್ನು ಹಮ್ಮಿಕೊಂಡು ಪಾಲಕರಿಗೆ ವಿವಿಧ ರೀತಿಯ ಆಟಗಳನ್ನು ನಡೆಸಲಾಯಿತು.
