ಉದಯವಾಹಿನಿ, ನವದೆಹಲಿ: ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಬಿಜೆಪಿ ಕೆಲ ನಾಯಕರಿಗೆ ಹಣದ ಆಮಿಷ ನೀಡುತ್ತಿದೆ ಎಂದು ಆಮ್ ಆದಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತನ್ನ 16 ಅಭ್ಯರ್ಥಿಗಳಿಗೆ ಬಿಜೆಪಿ ಕರೆ ಮಾಡಿ 15 ಕೋಟಿ ರೂಪಾಯಿ ನೀಡುವುದಾಗಿ ಆಫರ್ ನೀಡಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.ಕೆಲವು ಸಂಸ್ಥೆಗಳು ದುರುಪಯೋಗ ಪಡಿಸಿಕೊಂಡ ಪಕ್ಷ 55ಕ್ಕೂ ಹೆಚ್ಚು ಸ್ಥಾನ ಪಡೆಯುತ್ತಿದೆ ಎಂದು ತೋರಿಸುತ್ತಿವೆ. ಕಳೆದ ಎರಡು ಗಂಟೆಗಳಲ್ಲಿ ನಮ 16 ಅಭ್ಯರ್ಥಿಗಳಿಗೆ ಆಪ್ ತೊರೆದು ನಮ ಪಕ್ಷ ಸೇರಿದರೆ ಸಚಿವರನ್ನಾಗಿ ಮಾಡುವುದಾಗಿ ಹಾಗೂ ಪ್ರತಿಯೊಬ್ಬರಿಗೂ 15 ಕೋಟಿ ರೂಪಾಯಿ ನೀಡುವುದಾಗಿ ಕರೆ ಬಂದಿದೆ ಎಂದು ಕೇಜ್ರಿವಾಲ್ ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರ ಪಕ್ಷವು 55 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತಿದ್ದರೆ ಅವರು ನಮ ಅಭ್ಯರ್ಥಿಗಳನ್ನು ಕರೆಯುವ ಅಗತ್ಯವೇನು? ನಿಸ್ಸಂಶಯವಾಗಿ ಈ ನಕಲಿ ಸಮೀಕ್ಷೆಗಳನ್ನು ಕೆಲವು ಅಭ್ಯರ್ಥಿಗಳನ್ನು ಒಡೆಯಲು ಈ ವಾತಾವರಣವನ್ನು ಸೃಷ್ಟಿಸುವ ಏಕೈಕ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿದೆ. ಆದರೆ ನಮ ಒಬ್ಬ ವ್ಯಕ್ತಿ ಕೂಡ ಬೇರೆ ಆಗುವುದಿಲ್ಲ ಎಂದು ಅವರು ಹೇಳಿದರು.
ಎಎಪಿ ಬಿಟ್ಟು ನಮೊಂದಿಗೆ ಬನ್ನಿ : ಕೇಜ್ರಿವಾಲ್ ಅವರ ಆರೋಪಗಳನ್ನು ಬೆಂಬಲಿಸಿದ ಎಎಪಿ ನಾಯಕ ಮುಖೇಶ್ ಅಹ್ಲಾವತ್ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿಯ ಪಕ್ಷವನ್ನು ತೊರೆಯುವುದಕ್ಕಿಂತ ಸಾಯಲು ಬಯಸುತ್ತೇನೆ ಎಂದು ಹೇಳಿದರು.ದೂರವಾಣಿ ಕರೆಯೊಂದರ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿರುವ ಅವರು ನನಗೆ ಈ ಸಂಖ್ಯೆಯಿಂದ ಕರೆ ಬಂದಿದೆ. ಅವರ ಸರ್ಕಾರ ರಚನೆಯಾಗುತ್ತಿದೆ, ನನ್ನನ್ನು ಮಂತ್ರಿ ಮಾಡಿ 15 ಕೋಟಿ ರೂ. ಕೊಡುತ್ತಾರೆ ಎಂದರು. ಎಎಪಿ ತೊರೆದು ನಮೊಂದಿಗೆ ಬನ್ನಿ ಎಂದರು ಎಂದು ಅಹ್ಲಾವತ್ ಎಕ್‌್ಸನಲ್ಲಿ ಪೋಸ್ಟ್ನಲ್ಲಿ ಹೇಳಿದ್ದಾರೆ. ಕರೆ ಬಂದಿರುವ ನಂಬರ್ನ ಸ್ಕ್ರೀನ್ಶಾಟ್ ಜೊತೆಗೆ ಬಿಜೆಪಿಗೆ ಸೇರಲು ಲಂಚ ನೀಡಲು ಪ್ರಯತ್ನಿಸಿದ್ದಾರೆ .
