ಉದಯವಾಹಿನಿ, ಬೆಂಗಳೂರ: ದೇಶದ ಜನತೆ ಗ್ಯಾರಂಟಿಗಳನ್ನು ಒಪ್ಪುವುದಿಲ್ಲ ಎಂಬುದು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ಕರ್ನಾಟಕದಲ್ಲೂ ಇದು ತಾತ್ಕಾಲಿಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಭರಪೂರ ಆಶ್ವಾಸನೆಗಳನ್ನು ಘೋಷಣೆ ಮಾಡಿದರೂ ಜನತೆ ಅವರನ್ನು ತಿರಸ್ಕರಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಎಲ್ಲಾ ಕಾಲದಲ್ಲೂ ನಡೆಯುವುದಿಲ್ಲ ಎಂಬುದು ಫಲಿತಾಂಶದಿಂದ ಆತಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.
27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿ ಗೆದ್ದಿದ್ದೆ. ದೆಹಲಿ ಬಿಜೆಪಿ ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಭ್ರಷ್ಟಾಚಾರ ವಿರುದ್ಧ ಆಂದೋಲನ ಮಾಡಿ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿದ್ದರು. ಕೇಜ್ರಿವಾಲ್ ಬಣ್ಣ ಇದೀಗ ಬಯಲಾಗಿದೆ. ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್,ಸಚಿವರು ಭಾಗಿಯಾಗಿದ್ದರು. ಆಮ್ ಆದಿ ಪಾರ್ಟಿಯನ್ನ ಜನರು ತಿರಸ್ಕಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ತಾತಾಲ್ಕಿಕ ಅಷ್ಟೇ. ಕಾಂಗ್ರೆಸ್ ಒಂದು ಸ್ಥಾನ ಗೆದ್ದಿಲ್ಲ. ಶ್ಯೂನ ಸಂಪದಾನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಆರಂಭದಲ್ಲಿ ಕೇಜ್ರಿವಾಲ್ ಬಂದಾಗ ಮಫ್ಲರ್, ಟೋಪಿ,ವ್ಯಾಗನಾರ್ ಕಾರ್ ಇತ್ತು. ಈಗ ಶೇಷಮಹಲ್ ಬೇಂಜ್ ಕಾರ್ ರಾಜನ ರೀತಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದು ಟೀಕಿಸಿದರು. ಕ್ರೇಜಿವಾಲ್ ಮೊದಲು ಸಾಮಾನ್ಯವಾಗಿ ಬಂದವರು. ಆಮೇಲೆ ಶೀಷ್ ಮಾಲ್ ಕಟ್ಟಿದ್ದರು. 40 ರೂಂ, 40 ಲಕ್ಷದ ಟಿವಿ ಇಟ್ಟಿಕೊಂಡಿದ್ದರು. ಇದು ಕೂಡ ದೆಹಲಿ ಜನತೆ ಗಮನಿಸಿದ್ದಾರೆ.
